ಕಚೇರಿಯಲ್ಲಿ ಮಹಿಳೆಗೆ ಮರ್ಮಾಂಗ ತೋರಿಸಿ ವಿಕೃತಿ ಮೆರೆದ ಗ್ರೇಡ್ 2 ತಹಶೀಲ್ದಾರ್!
ಚಿಕ್ಕೋಡಿ: ವಿಧವಾ ವೇತನ ಕೇಳಲು ಬಂದ ಮಹಿಳೆಗೆ ಗ್ರೇಡ್ 2 ತಹಶೀಲ್ದಾರ್ ವೋರ್ವ ತನ್ನ ಮರ್ಮಾಂಗವನ್ನು ತೋರಿಸುವ ಮೂಲಕ ವಿಕೃತಿ ಮೆರೆದಿರುವ ಆರೋಪ ಕೇಳಿ ಬಂದಿದ್ದು, ಸಂತ್ರಸ್ತ ಮಹಿಳೆಯ ಪುತ್ರ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ.
ಚಿಕ್ಕೋಡಿ ತಾಲೂಕಿನ ಅಖಲಿ ಗ್ರಾಮದ ಮಹಿಳೆಯ ಪತಿ ಕೊವಿಡ್ ಸೋಂಕಿನಿಂದ ಮೃತಪಟ್ಟಿದ್ದರು. ಹೀಗಾಗಿ ತಾಯಿಗೆ ಸರ್ಕಾರದಿಂದ ವಿಧವಾ ವೇತನ ಮಂಜೂರು ಮಾಡಿದಲು ಕಳೆದ ಎರಡು ವಾರಗಳಿಂದ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ಡಿ.ಎಸ್.ಜಮಾದಾರ ಮಹಿಳೆಯ ಪುತ್ರನನ್ನು ಅಲೆದಾಡಿಸಿದ್ದ ಎನ್ನಲಾಗಿದೆ. ಇದಾದ ಬಳಿಕ ನೀನೇಕೆ ಕಚೇರಿಗೆ ಬರುತ್ತಿದ್ದಿ, ನಿನ್ನ ತಾಯಿಯನ್ನು ಬರಲು ಹೇಳು ಎಂದು ಹೇಳಿದ್ದ ಎನ್ನಲಾಗಿದೆ.
ಇದರಿಂದಾಗಿ ಇಂದು ಯುವಕ ತನ್ನ ತಾಯಿಯನ್ನು ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಮಗನನ್ನು ಹೊರಗೆ ನಿಲ್ಲಿಸಿ, ತಾಯಿಯನ್ನು ಮಾತ್ರವೇ ಒಳಗೆ ಕರೆದ ಗ್ರೇಡ್ 2 ತಹಶೀಲ್ದಾರ್ ಬ್ಯಾಂಟ್ ಬಿಚ್ಚಿ ತನ್ನ ಮರ್ಮಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದು, ಈ ವೇಳೆ ಭಯ ಭೀತರಾದ ಮಹಿಳೆ ಆತನ ಕಚೇರಿಯಿಂದ ಹೊರಗೆ ಓಡಿ ಬಂದು ಮಗನಿಗೆ ಈ ವಿಚಾರ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಘಟನೆಯ ಬಳಿಕ ಚಿಕ್ಕೋಡಿ ತಹಶೀಲ್ದಾರ್, ಪ್ರೀತಂ ಜೈನ್ ಸ್ಥಳಕ್ಕೆ ಬಂದಿದ್ದು, ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆನ್ನಲಾಗಿದೆ. ಇದೇ ಗ್ರೇಡ್ 2 ತಹಶೀಲ್ದಾರ್ ಡಿ.ಎಸ್.ಜಮಾದಾರ ಹಲವು ಬಾರಿ ಇದೇ ರೀತಿಯ ವರ್ತನೆಯನ್ನು ತೋರಿಸಿದ್ದ ಎನ್ನುವ ಆರೋಪವನ್ನು ಇಲ್ಲಿನ ಸಾರ್ವಜನಿಕರು ಹಾಗೂ ಪತ್ರಕರ್ತರು ಕೂಡ ಹೇಳುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಈತ ಮಹಿಳಾ ಸಿಬ್ಬಂದಿಗೆ ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದ ಎನ್ನುವ ಆರೋಪ ಕೇಳಿ ಬಂದಿದೆ.
ಇನ್ನಷ್ಟು ಸುದ್ದಿಗಳು:
ಮಹಿಳೆಯನ್ನು ಅಪಹರಿಸಿ ಲಾಡ್ಜ್ ನಲ್ಲಿ ಕ್ರೂರ ಲೈಂಗಿಕ ಹಿಂಸೆ ನೀಡಿದ ಗ್ಯಾಂಗ್ | ಬೆಚ್ಚಿಬೀಳಿಸಿದ ಘಟನೆ
ಬಾಡಿಗೆ ಬೇಡ, ಆಸೆ ಪೂರೈಸು ಎಂದು ಮನೆ ಮಾಲಿಕನಿಂದ ಮಹಿಳೆಗೆ ಕಿರುಕುಳ
ಅಪ್ಪನಿಗೂ, ಮಗನಿಗೂ ಒಬ್ಬಳೇ ಹೆಂಡತಿ | ವಿಚಿತ್ರ ಕೇಸ್ ನೋಡಿ ಶಾಕ್ ಆದ ಪೊಲೀಸರು
14ರ ಬಾಲಕಿಯನ್ನು ವೇಶ್ಯಾವಾಟಿಕೆಗೆ ಬಳಕೆ: 7 ಮಂದಿಯಿಂದ ನಿರಂತರ ಅತ್ಯಾಚಾರ