ಮಹಿಳೆಯನ್ನು ಸಾಮೂಹಿಕ ಅತ್ಯಾಚಾರ ನಡೆಸಿ ಬೆಂಕಿ ಹಚ್ಚಿದ ಅಪ್ಪ-ಮಗ
ಸೀತಾಪುರ: ಉತ್ತರ ಪ್ರದೇಶದ ಸೀತಾಪುರದ ಮಿಶ್ರಿಖ್ ಪ್ರದೇಶದಲ್ಲಿ ಮನೆಗೆ ತೆರಳುತ್ತಿದ್ದಾಗ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅಪ್ಪ-ಮಗ ಬೆಂಕಿ ಇಟ್ಟಿರುವ ಘಟನೆ ವರದಿಯಾಗಿದೆ.
ಗಂಭೀರ ಸುಟ್ಟಗಾಯಗಳೊಂದಿಗೆ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಬ್ಬರು ವಶಕ್ಕೆ ಪಡೆಯಲಾಗಿದೆ. ನೈಮಿಶರಣ್ಯದ ಮಿಶ್ರಿಖ್ ಪ್ರದೇಶದಲ್ಲಿ ಮೂವತ್ತರ ಹರೆಯದ ಮಹಿಳೆಯೊಬ್ಬಳ ಮೇಲೆ ತಂದೆ ಮಗ ಅತ್ಯಾಚಾರ ನಡೆಸಿ ಬೆಂಕಿ ಇಟ್ಟಿದ್ದಾರೆ.
ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಆರ್.ಪಿ.ಸಿಂಗ್ ಪ್ರಕಾರ, ಮಹಿಳೆ ಸಿಧೌಲಿ ಪ್ರದೇಶದ ತನ್ನ ತಾಯಿಯ ಮನೆಯಿಂದ ಮಿಶ್ರಿಖ್‌ಗೆ ಹೋಗುತ್ತಿದ್ದಾಳೆ ಮತ್ತು ಮನೆಗೆ ಹೋಗುವಾಗ ಆರೋಪಿಗಳಲ್ಲಿ ಒಬ್ಬನಾದ ಬಂಡಿ ಎಳೆಯುವವರಿಂದ ಲಿಫ್ಟ್ ಕೇಳಿದ್ದಾಳೆ. ಲಿಫ್ಟ್ ಕೊಡಲು ಮಹಿಳೆಯನ್ನು ಬಂಡಿಯಲ್ಲಿ ಹತ್ತಿಸಿದವರು ಕೃತ್ಯ ನಡೆಸಿದ್ದಾರೆ. ಆರೋಪಿಗಳಾದ 55 ವರ್ಷದ ವ್ಯಕ್ತಿ ಮತ್ತು ಆತನ ವಯಸ್ಕ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಮತ್ತು ವಿಚಾರಣೆ ನಡೆಯುತ್ತಿದೆ ಎಂದು ಎಸ್ಪಿ ಹೇಳಿದರು.
ಮಹಿಳೆಯನ್ನು ಸೀತಾಪುರದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆಕೆಗೆ ಶೇ 30 ರಷ್ಟು ಸುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆಂದು ವೈದ್ಯರ ತಂಡ ಖಚಿತಪಡಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.