ಮಹಿಳೆಯನ್ನು ಅತ್ಯಾಚಾರ ಮಾಡಿ ಪರಾರಿಯಾಗುತ್ತಿದ್ದವನನ್ನು ಹಿಡಿದ ನಾಯಿ!
ಕೊಯಮತ್ತೂರು: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯ ಅತ್ಯಾಚಾರ ನಡೆಸಿ ಪರಾರಿಯಾಗುತ್ತಿದ್ದ ಆರೋಪಿಯೋರ್ವನನ್ನು ನಾಯಿಯೊಂದು ಸಾರ್ವಜನಿಕರಿಗೆ ಹಿಡಿದುಕೊಟ್ಟ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.
29 ವರ್ಷ ವಯಸ್ಸಿನ ಎಂ.ದಿಲೀಪ್ ಕುಮಾರ್ ಎಂಬಾತ ರಾತ್ರಿ ವೇಳೆಯಲ್ಲಿ 30 ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದರೂ ಯಾರಿಗೂ ತಿಳಿದಿರಲಿಲ್ಲ. ಇದನ್ನೆಲ್ಲ ತಿಳಿದುಕೊಳ್ಳಬೇಕು ಎಂದು ಅಂದುಕೊಳ್ಳುವಷ್ಟೋ ಅಥವಾ ಮಹಿಳೆಯರ ರಕ್ಷಣೆ ಮಾಡಬೇಕು ಎಂದು ಕೊಳ್ಳುವಷ್ಟು ಸಂತ್ರಸ್ತೆಯ ಮನೆಯವರು ಕೂಡ ಒಳ್ಳೆಯವರಾಗಿರಲಿಲ್ಲ.
ಸೆಲ್ವಪುರಂದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಕುಟುಂಬಸ್ಥರು ಶೆಡ್ ನಲ್ಲಿ ಇಟ್ಟಿದ್ದರು. ಮನೆಯವರು ಇನ್ನೊಂದು ಮನೆಯಲ್ಲಿ ಹಾಯಾಗಿ ಬದುಕುತ್ತಿದ್ದರು. ಈ ನಡುವೆ ದಿಲೀಪ್ ಕುಮಾರ್ ರಾತ್ರಿ ವೇಳೆ ಮಾನಸಿಕ ಅಸ್ವಸ್ಥೆ ಇದ್ದ ಶೆಡ್ ಗೆ ಬಂದು ಆಕೆಯ ಮೇಲೆ ಅತ್ಯಾಚಾರ ನಡೆಸಿ ಹೋಗುತ್ತಿದ್ದ.
ಈ ಹಿಂದೆಯೂ ಹಲವು ಬಾರಿ ಮಹಿಳೆಯ ಮೇಲೆ ದಿಲೀಪ್ ಅತ್ಯಾಚಾರ ನಡೆಸಿದ್ದ. ಹಾಗೆಯೇ ಈ ಬಾರಿಯೂ ಆತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದು, ಅತ್ಯಾಚಾರ ನಡೆಸುವ ವೇಳೆ ವಿಡಿಯೋ ಕೂಡ ಮಾಡಿದ್ದಾನೆ. ಅತ್ಯಾಚಾರ ನಡೆಸಿ, ತನ್ನ ಬೈಕ್ ನಿಲ್ಲಿಸಿದ್ದ ಸ್ಥಳಕ್ಕೆ ಹೋಗುವ ವೇಳೆ ಏಕಾಏಕಿ ಸಾಕು ನಾಯಿ ದಿಲೀಪ್ ಕುಮಾರ್ ನ ಮೇಲೆರಗಿದ್ದು, ಜೋರು ಶಬ್ಧದಲ್ಲಿ ಬೊಗಳಿದೆ. ಈ ವೇಳೆ ತಮ್ಮ ಮನೆಗೆ ಕಳ್ಳರು ಬಂದಿರಬಹುದು ಅಂದುಕೊಂಡು ಎದ್ದು ನೋಡಿದಾಗ ಆರೋಪಿ ದಿಲೀಪ್ ಪತ್ತೆಯಾಗಿದ್ದಾನೆ.
ದಿಲೀಪ್ ನ ಮೊಬೈಲ್ ತೆರೆದು ನೋಡಿದಾಗ ಆತ ಮಹಿಳೆಯನ್ನು ಅತ್ಯಾಚಾರ ನಡೆಸಿರುವ ವಿಡಿಯೋಗಳು ಮೊಬೈಲ್ ನಲ್ಲಿ ಪತ್ತೆಯಾಗಿದೆ. ಇಲ್ಲಿಯವರೆಗೆ ಮಾನಸಿಕ ಅಸ್ವಸ್ಥೆಯಾಗಿದ್ದ ತನ್ನ ಕುಟುಂಬದ ಸದಸ್ಯೆಯನ್ನು ಸರಿಯಾಗಿ ನೋಡಿಕೊಳ್ಳದ, ಗಮನಿಸಿದ ಕುಟುಂಬಸ್ಥರು ಈಗ ಆಕೆಯನ್ನು ಪರೀಕ್ಷೆಗೊಳಪಡಿಸಿದ್ದು, ಆಕೆ ಗರ್ಭೀಣಿ ಎನ್ನುವುದು ತಿಳಿದು ಬಂದಿದೆ.
ಆರೋಪಿ ದಿಲೀಪ್ ನನ್ನು ನ್ಯಾಯಾಂಗ ಕಸ್ಟೆಡಿಗೆ ಕಳುಹಿಸಲಾಗಿದೆ. ನ್ಯಾಯ ಪ್ರಕಾರ ನೋಡುವುದಾದರೆ, ಕುಟುಂಬಸ್ಥರು ಮಹಿಳೆಯನ್ನು ಏಕಾಂಗಿಯಾಗಿ ಶೆಡ್ ನಲ್ಲಿ ಬಿಟ್ಟಿರುವುದಕ್ಕೆ ಕುಟುಂಬಸ್ಥರ ಮೇಲೆಯೂ ಪೊಲೀಸರು ಕೇಸು ದಾಖಲಿಸಬೇಕಿತ್ತು. ಹಲವು ಬಾರಿ ಶೆಡ್ ಗೆ ನುಗ್ಗಿ ಆತ ಅತ್ಯಾಚಾರ ನಡೆಸಿದ್ದರೂ ಮನೆಯವರು ಆಕೆಯ ಬಗ್ಗೆ ಗಮನವೇ ನೀಡಿರಲಿಲ್ಲ. ಅತ್ಯಾಚಾರಿ ಕೆಟ್ಟವನಾಗಿ ಬಂದು ಕೆಟ್ಟವನಾಗಿ ಹೋದ. ಆದರೆ ಮನೆಯವರು ಸಮಾಜದ ದೃಷ್ಠಿಯಲ್ಲಿ ಒಳ್ಳೆಯವರೇ ಆಗಿ ಉಳಿದು, ಕೆಟ್ಟವರಾಗಿದ್ದಾರೆ.