ಮಹಿಳೆ ಜೊತೆಗೆ ಅಕ್ರಮ ಸಂಬಂಧ: ಕಾನ್‌ ಸ್ಟೇಬಲ್‌ ನ  ಕೈ ಕಾಲು ಕಟ್ಟಿ ಹಿಗ್ಗಾಮುಗ್ಗಾ ಥಳಿತ - Mahanayaka

ಮಹಿಳೆ ಜೊತೆಗೆ ಅಕ್ರಮ ಸಂಬಂಧ: ಕಾನ್‌ ಸ್ಟೇಬಲ್‌ ನ  ಕೈ ಕಾಲು ಕಟ್ಟಿ ಹಿಗ್ಗಾಮುಗ್ಗಾ ಥಳಿತ

yadagiri news
02/09/2021

ಯಾದಗಿರಿ: ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ಮೀಸಲು ಪಡೆಯ ಕಾನ್‌ ಸ್ಟೇಬಲ್‌ ಮೇಲೆ ಮಹಿಳೆ ಕಡೆಯವರು ಕೈ, ಕಾಲು ಕಟ್ಟಿ ಥಳಿಸಿದ್ದಾರೆ.

ನಗರ ಹೊರವಲಯದಲ್ಲಿ ಬುಧವಾರ ಸಂಜೆ ಘಟನೆ ನಡೆದದ್ದು, ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

ಒಂದು ವರ್ಷದಿಂದ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಕಾನ್‌ ಸ್ಟೇಬಲ್‌ ಹಲವಾರು ಬಾರಿ ಮಹಿಳೆ ಕಡೆಯವರು ಬುದ್ದಿವಾದ ಹೇಳಿದರೂ ಕೇಳಿಲ್ಲ.‌ ಇದರಿಂದ ರೋಸಿ ಹೋದ ಅವರು ಬುಧವಾರ ಮನೆ ಕಡೆ ಬಂದಾಗ ಬಟ್ಟೆಯಿಂದ ಕೈ, ಕಾಲು ಕಟ್ಟಿ ಥಳಿಸಿದ್ದಾರೆ. ಮಹಿಳೆ ಸಾಲವೂ ಕೊಡಿಸಿದ್ದ. ಮಹಿಳೆಗೆ ಮಕ್ಕಳು ಇದ್ದಾರೆ.‌ ಕಾನ್ ಸ್ಟೆಬಲ್ ಅವಿವಾಹಿತ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಮಹಿಳೆ ನೀಡಿದ ದೂರಿನ ಪ್ರಕಾರ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಇನ್ನೂ  ಕಾನ್ ಸ್ಟೇಬಲ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ಯಾವುದೇ ಮಾಹಿತಿಗಳು ತಿಳಿದು ಬಂದಿಲ್ಲ.

ಇನ್ನಷ್ಟು ಸುದ್ದಿಗಳು…

ಆಟವಾಡುತ್ತಿದ್ದ ಬಾಲಕನ ಮೇಲೆ ಪೈಪ್ ಉರುಳಿಬಿದ್ದು ಬಾಲಕ ಸಾವು!

ಕೈಕೊಟ್ಟ ಕೇಂದ್ರ ಸರ್ಕಾರ: ಈ ಪ್ರಮುಖ 10 ಯೋಜನೆಗಳಿಗೆ ಬಿಡಿಗಾಸೂ ಬಿಡುಗಡೆಯಾಗಿಲ್ಲ!

ನೀರಿನ ಬಾಟಲಿಯೇ ಬೆಂಗಳೂರಿನ ಅಪಘಾತಕ್ಕೆ ಕಾರಣವಾಯ್ತೆ? | ಅಪಘಾತದ ವೇಳೆ ನಡೆದದ್ದೇನು?

ಶಾಶ್ವತ ಸೂರಿಗಾಗಿ ರಸ್ತೆಯಲ್ಲಿ 6 ಕಿ.ಮೀ. ಉದ್ದಂಡ ನಮಸ್ಕಾರ ಹಾಕಿ ದಲಿತ ಮಹಿಳೆಯರು!

ಗಾಯದ ಮೇಲೆ ಬರೆ: ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ

ಮಹಿಳೆಯ ನಗ್ನ ಚಿತ್ರ ಇಟ್ಟುಕೊಂಡು ಬ್ಲ್ಯಾಕ್ ಮೇಲ್ | ಆರೋಪಿ ಅರೆಸ್ಟ್

ಇತ್ತೀಚಿನ ಸುದ್ದಿ