ಆಂಬುಲೆನ್ಸ್ ಸಿಗಲಿಲ್ಲ..! ಮಹಿಳೆಯ ಮೃತದೇಹವನ್ನು ಬೈಕ್ ನಲ್ಲಿ ಸಾಗಿಸಿದ ಕುಟುಂಬಸ್ಥರು

bike
27/04/2021

ಹೈದರಾಬಾದ್: ಅನಾರೋಗ್ಯದಿಂದ ಸಾವನ್ನಪ್ಪಿದ ಮಹಿಳೆಯವ ಮೃತದೇಹವನ್ನು ಸಾಗಿಸಲು ಅಂಬ್ಯುಲೆನ್ಸ್​​​ ಸಿಗದ ಹಿನ್ನಲೆ ಕುಟುಂಬಸ್ಥರೇ ಅವರನ್ನು ಬೈಕ್​ನಲ್ಲಿ ಹುಟ್ಟೂರಿಗೆ ಕರೆದು ತಂದಿರುವ ಘಟನೆ ಬೆಳಕಿಗೆ ಬಂದಿದೆ.

ಆಂಧ್ರ ಪ್ರದೇಶದ ಶ್ರೀಕಾಕುಳಂನ ಮಂದಾಸ ಮಂಡಲ್ ಗ್ರಾಮದ 50 ವರ್ಷ ವಯಸ್ಸಿನ ಮಹಿಳೆ ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. ಆದರೆ ಪರೀಕ್ಷಾ ವರದಿ ಬರುವ ಮೊದಲೇ ಅವರು ಮೃತಪಟ್ಟಿದ್ದರು.

ಅವರ ಮೃತದೇಹವ್ನು ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ಹೇಳಿದ್ದರಿಂದಾಗಿ ಕುಟುಂಬಸ್ಥರು ಆಂಬುಲೆನ್ಸ್ ಗಾಗಿ ಸತತ ಪ್ರಯತ್ನ ನಡೆಸಿದರೂ ಆಂಬುಲೆನ್ಸ್ ಸಿಗಲೇ ಇಲ್ಲ. ಕೊನೆಗೆ ಏನು ಮಾಡಬೇಕು ಎನ್ನುವುದು ತೋಚದೇ, ಮಹಿಳೆಯ ಮಗ ಮತ್ತು ಆಕೆಯ ಅಳಿಯ ಮೃತದೇಹವನ್ನು ಬೈಕ್ ನಲ್ಲಿ ಕೂರಿಸಿಕೊಂಡು ತಮ್ಮ ಗ್ರಾಮಕ್ಕೆ ತಂದಿದ್ದಾರೆ.

ಇತ್ತೀಚಿನ ಸುದ್ದಿ

Exit mobile version