ಮಹಿಳೆಯ ನಗ್ನ ಚಿತ್ರ ಇಟ್ಟುಕೊಂಡು ಬ್ಲ್ಯಾಕ್ ಮೇಲ್ | ಆರೋಪಿ ಅರೆಸ್ಟ್
ಮೂಡುಬಿದಿರೆ: ವ್ಯಕ್ತಿಯೋರ್ವ ಮಹಿಳೆಯ ಸ್ನೇಹ ಬೆಳೆಸಿ, ಆಕೆಯ ನಗ್ನ ಚಿತ್ರಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದು, ಇದೀಗ ಮಹಿಳೆ ನೀಡಿದ ದೂರಿನನ್ವಯ ಮೂಡುಬಿದಿರೆ ಪೊಲೀಸರು ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ವಿಜಯ್ ಗೌಡ ಬಂಧಿತ ಆರೋಪಿಯಾಗಿದ್ದು, ಈತ ಮಹಿಳೆಯ ಮನೆಗೆ ಕೆಲಸಕ್ಕೆ ಬಂದಿದ್ದ ಎಂದು ಹೇಳಲಾಗಿದೆ. ಬಳಿಕ ಮಹಿಳೆಯ ನಂಬರ್ ಪಡೆದುಕೊಂಡು ಸಲುಗೆ ಬೆಳೆಸಿ, ನಿನ್ನ ನಗ್ನ ಚಿತ್ರ ನನಗೆ ಕಳುಹಿಸು ಎಂದು ಹೇಳಿದ್ದು, ಈ ವೇಳೆ ಮಹಿಳೆ ಕಳುಹಿಸಲು ನಿರಾಕರಿಸಿದಾಗ, ನಿನಗೂ ನನಗೂ ಸಂಬಂಧ ಇದೆ ಎಂದು ಊರಿನಲ್ಲಿ ಸುದ್ದಿ ಹಬ್ಬಿಸುವುದಾಗಿ ಆರೋಪಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿಯ ಬ್ಲ್ಯಾಕ್ ಮೇಲ್ ಗೆ ಬೆದರಿದ ಮಹಿಳೆ ಯುವಕನಿಗೆ ನಗ್ನ ಚಿತ್ರಗಳನ್ನು ಕಳುಹಿಸಿದ್ದಾಳೆ. ಆ ಬಳಿಕ ನನ್ನ ಜೊತೆಗೆ ಲೈಂಗಿಕ ಕ್ರಿಯೆ ನಡೆಸು, ನನಗೆ ಹಣ ಕೊಡು ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇಲ್ಲವಾದರೆ ಫೋಟೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.
ಆರೋಪಿಯು ಆಗಸ್ಟ್ 19ರಂದು ಎರಡು ಸಾವಿರ ರೂಪಾಯಿ ವಸೂಲಿ ಮಾಡಿಕೊಂಡಿದ್ದಾನೆ. ಆಗಸ್ಟ್ 28ರಂದು ಮಹಿಳೆಯ ಮನೆಗೆ ತೆರಳಿ, ಹಣ ನೀಡುವಂತೆ ಪೀಡಿಸಿದ್ದು, ಹಣ ನೀಡದೇ ಇದ್ದಾಗ ನಗ್ನ ಚಿತ್ರಗಳನ್ನು ಮಹಿಳೆಯ ಸ್ನೇಹಿತರಿಗೆ ಕಳುಹಿಸಿ ಮಾನಹರಾಜು ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ನ್ಯಾಯಾಲಯದ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಫೋಕ್ಸೋ ಪ್ರಕರಣದ ಆರೋಪಿ
ಅಪಘಾತದಲ್ಲಿ ಶಾಸಕರ ಪುತ್ರ ಸೇರಿದಂತೆ 7 ಮಂದಿ ಸಾವು | ಅಪಘಾತಕ್ಕೂ ಮೊದಲು ಎಚ್ಚರಿಕೆ ನೀಡಿದ್ದ ಪೊಲೀಸರು
ವಿಪರೀತ ವೇಗದಿಂದ ಬಂದು ಕಾಂಪೌಂಡ್ ಗೆ ಡಿಕ್ಕಿ ಹೊಡೆದ ಕಾರು: 7 ಮಂದಿ ಬಲಿ
ಏಳೆಂಟು ವರ್ಷದ ಪ್ರೀತಿ ನಡು ರಸ್ತೆಯಲ್ಲಿ ದುರಂತ ಅಂತ್ಯ! | ಪ್ರಿಯತಮೆಯ ಕತ್ತು ಸೀಳಿ, ತನ್ನ ಕತ್ತನ್ನೂ ಸೀಳಿಕೊಂಡ!
ವಿಪರೀತ ವೇಗದಿಂದ ಬಂದು ಕಾಂಪೌಂಡ್ ಗೆ ಡಿಕ್ಕಿ ಹೊಡೆದ ಕಾರು: 7 ಮಂದಿ ಬಲಿ