ವಿವಾಹಿತ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿಕೊಂದು ಮೃತದೇಹದೊಂದಿಗೆ ಮಲಗಿದ ಪಾಗಲ್ ಪ್ರೇಮಿ!
ಜೈಪುರ: ತನ್ನ ಪ್ರೀತಿಸುವಂತೆ ವಿವಾಹಿತ ಮಹಿಳೆಯನ್ನು ಪೀಡಿಸುತ್ತಿದ್ದ ಯುವಕನೋರ್ವ ಆಕೆ ಪ್ರೀತಿಸಲು ನಿರಾಕರಿಸಿದಾಗ ಆಕೆಯನ್ನು ಕೊಚ್ಚಿ ಹತ್ಯೆ ಮಾಡಿ ಮೃತದೇಹವನ್ನು ತಬ್ಬಿಕೊಂಡು ಮಲಗಿದ ವಿಲಕ್ಷಣ ಘಟನೆಯೊಂದು ರಾಜಸ್ಥಾನದ ಅಹೋರ್ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಶಾಂತಿ ದೇವಿ ಎಂಬ ಮಹಿಳೆ ಹತ್ಯೆಗೀಡಾದವರು ಎಂದು ಹೇಳಲಾಗಿದೆ. ಮೃತ ಮಹಿಳೆಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಇವರ ಪತಿ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದರು. ಪತಿ ಇಲ್ಲದ ವೇಳೆ ಮನೆಗೆ ಬಂದ ಆರೋಪಿ, 21 ವರ್ಷ ವಯಸ್ಸಿನ ಗಣೇಶ್ ಮೀನಾ ಎಂಬಾತ ತನ್ನನ್ನು ಪ್ರೀತಿಸುವಂತೆ ಕೇಳಿಕೊಂಡಿದ್ದಾನೆ.
ನನಗೆ ಮದುವೆ ಆಗಿ ಎರಡು ಮಕ್ಕಳಿದ್ದಾರೆ ಎಂದು ಶಾಂತಿ ದೇವಿ ಹೇಳಿದರೂ ಆತ ಕೇಳದೇ ಮತ್ತೆ ಮತ್ತೆ ಪೀಡಿಸಿದಾಗ, ನಾನು ನಿನ್ನನ್ನು ಪ್ರೀತಿಸಲು ಸಾಧ್ಯವಿಲ್ಲ ಎಂದು ಮಹಿಳೆ ಆಕ್ರೋಶದಿಂದ ಹೇಳಿದ್ದಾರೆ. ಈ ವೇಳೆ ಆರೋಪಿಯು ಕೊಡಲಿಯಿಂದ ಮಹಿಳೆಯನ್ನು ಮನ ಬಂದಂತೆ ಕೊಚ್ಚಿ ಹಾಕಿದ್ದು, ಬಳಿಕ ಆಕೆಯ ಮೃತದೇಹವನ್ನು ತಬ್ಬಿಕೊಂಡು ಮಲಗಿದ್ದಾನೆ.
ಈತನ ಕೃತ್ಯವನ್ನು ಸ್ಥಳೀಯರು ಯತ್ನಿಸಿದ್ದಾರೆ. ಆದರೆ, ಆತ ಕೊಡಲಿಯಿಂದ ಹಲ್ಲೆ ನಡೆಸುವ ಭೀತಿಯಿಂದ ಯಾರು ಕೂಡ ಸಮೀಪಕ್ಕೆ ಹೋಗುವ ಧೈರ್ಯ ತೋರಿಲ್ಲ ಎನ್ನಲಾಗಿದೆ. ಇದರಿಂದಾಗಿ ಪೊಲೀಸರು ಸ್ಥಳಕ್ಕೆ ಆಗಮಿಸುವವರೆಗೂ ಆತ ಶವವನ್ನು ತಬ್ಬಿಕೊಂಡು ಮಲಗಿದ್ದ ಎನ್ನಲಾಗಿದೆ. ಘಟನೆ ಸಂಬಂಧ ಶಾಂತಿ ದೇವಿಯ ಸಹೋದರರು ದೂರು ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb