ಮನೆಯೊಳಗೆ ಒಂಟಿ ಮಹಿಳೆಯನ್ನು ಕೂಡಿ ಹಾಕಿ ಅತ್ಯಾಚಾರ ನಡೆಸಿ, ಕೊಲೆ ಬೆದರಿಕೆ! - Mahanayaka
1:04 AM Wednesday 11 - December 2024

ಮನೆಯೊಳಗೆ ಒಂಟಿ ಮಹಿಳೆಯನ್ನು ಕೂಡಿ ಹಾಕಿ ಅತ್ಯಾಚಾರ ನಡೆಸಿ, ಕೊಲೆ ಬೆದರಿಕೆ!

bantwala crime news
14/08/2021

ಪುಂಜಾಲಕಟ್ಟೆ: ಒಬ್ಬಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯೊಬ್ಬರ ಮನೆಗೆ ನುಗ್ಗಿದ ವ್ಯಕ್ತಿಯೋರ್ವ ಮಹಿಳೆಯನ್ನು ಅತ್ಯಾಚಾರ ನಡೆಸಿ, ಕೊಲೆ ಬೆದರಿಕೆ ಹಾಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಗಬೆಟ್ಟುವಿನಲ್ಲಿ ನಡೆದಿದೆ.

ಆಗಸ್ಟ್ 11ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದ್ದು,  ಸಿದ್ದಕಟ್ಟೆಯ ಅನಿಲ್ ಎಂಬಾತ ಅತ್ಯಾಚಾರ ನಡೆಸಿದ ಆರೋಪಿ ಎಂದು ತಿಳಿದು ಬಂದಿದ್ದು, ಕೃತ್ಯ ಬೆಳಕಿಗೆ ಬಂದ ಬಳಿಕ ಆರೋಪಿಯು ತಲೆ ಮರೆಸಿಕೊಂಡಿದ್ದಾನೆ.

ಸಂತ್ರಸ್ತ ಮಹಿಳೆಯ ಪತಿ ನಿಧನರಾಗಿದ್ದು, ಪುತ್ರಿ ವಿವಾಹವಾಗಿ ಗಂಡನ ಮನೆಯಲ್ಲಿದ್ದರು. ಹೀಗಾಗಿ 52 ವರ್ಷ ವಯಸ್ಸಿನಲ್ಲಿಯೂ ಕೂಲಿ ಕೆಲಸ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು.  ಆದರೆ, ಆರೋಪಿಯು ಸಂಜೆಯ ವೇಳೆ ಏಕಾಏಕಿ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ.

ಘಟನೆಯ ಬಳಿಕ ಸಂತ್ರಸ್ತೆ ಮಹಿಳೆ ತಮ್ಮ ಮಗಳು ಹಾಗೂ ಅಳಿಯನಿಗೆ ಕರೆ ಮಾಡಿ ಈ ವಿಚಾರವನ್ನು ತಿಳಿಸಿದ್ದು, ಈ ಸಂಬಂಧ ಆರೋಪಿಯ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಮಕ್ಕಳಾಗುತ್ತಿಲ್ಲ, ಪರಿಹಾರ ತಿಳಿಸಿ ಎಂದು ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ಮಾಟಗಾರ!

ವಾಜಪೇಯಿ ಮದ್ಯ, ಮಾಂಸ ಪ್ರಿಯರು, ಸಾರ್ವರ್ಕರ್ ಬಾರ್ ಎಂದು ಹೆಸರಿಡುತ್ತಾರೆಯೇ? | ಸಿ.ಟಿ.ರವಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಬಿಗ್ ಬಾಸ್ ಸೀಸನ್ 8 ಮುಗಿದ ಬೆನ್ನಲ್ಲೇ ಮತ್ತೆ 7 ದಿನಗಳವರೆಗೆ ನಡೆಯಲಿದೆ ಬಿಗ್ ಬಾಸ್ ಕಾರ್ಯಕ್ರಮ!

ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿಯಾಗುವ ಸಾಧ್ಯತೆ? | ಸಿಎಂ ಬೊಮ್ಮಾಯಿ ಹೇಳಿದ್ದೇನು?

ಕೂದಲು ಉದುರುವಿಕೆಗೆ ಅತ್ಯಂತ ಸುಲಭ ಪರಿಹಾರ ಏನು ಗೊತ್ತಾ?

ಎನ್.ಮಹೇಶ್ ಗೆ ಬಿಎಸ್ ಪಿಯಿಂದ ಅನ್ಯಾಯ ಆಗಿಲ್ಲ | ಬಿಎಸ್ ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ

ಇತ್ತೀಚಿನ ಸುದ್ದಿ