ಮಹಿಳೆಯನ್ನು ಕಾಡಿನಲ್ಲಿ ಒತ್ತೆಯಾಳಾಗಿರಿಸಿ 3 ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ - Mahanayaka

ಮಹಿಳೆಯನ್ನು ಕಾಡಿನಲ್ಲಿ ಒತ್ತೆಯಾಳಾಗಿರಿಸಿ 3 ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ

mirjapur
28/06/2021

ಮಿರ್ಜಾಪುರ:  ಮಹಿಳೆಯನ್ನು ಅಪಹರಿಸಿ 3 ತಿಂಗಳ ಕಾಲ ಕಾಡಿನಲ್ಲಿ ಒತ್ತೆಯಾಳಾಗಿರಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಲಾಲ್ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯ ಮಹಿಳೆಯನ್ನು ಮಾರ್ಚ್ 1ರಂದು ಅಪಹರಿಸಲಾಗಿತ್ತು. ಈ ಸಂಬಂಧ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದರು. ಜೂನ್ 7ರಂದು ಪತೇರಾ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ.

ಮಹಿಳೆಗೆ ಪ್ರಜ್ಞೆ ಬಂದಾಗ ನಡೆದ ಘಟನೆ ತಿಳಿಸಿದ್ದು, ತನ್ನನ್ನು ಇದೇ ಹಳ್ಳಿಯ ಯುವಕನೋರ್ವ ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ. ಅವನೊಂದಿಗೆ ಇನ್ನೂ ಮೂವರು ಇದ್ದರು.  ಅವರೆಲ್ಲರೂ ಮೂರು ತಿಂಗಳುಗಳ ಕಾಲ ನನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಜೊತೆಗೆ ನನಗೆ ಚಿತ್ರಹಿಂಸೆ ನೀಡಿದ್ದಾರೆ. ನಾನು ವಿರೋಧಿಸಿದಾಗ ಅವರು ನನಗೆ ಹಲ್ಲೆ ಮಾಡಿದ್ದು, ಈ ವೇಳೆ ನಾನು ಮೂರ್ಛೆ ಹೋಗಿದ್ದೆ ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

ಇನ್ನೂ ಸಂತ್ರಸ್ತೆಯ ಹೇಳಿಕೆಯ ಪ್ರಕಾರ ಅಂದಾಜಿಸುವುದಾದರೆ, ಮಹಿಳೆ ಪ್ರಜ್ಞೆ ತಪ್ಪಿದ ವೇಳೆ, ಆಕೆ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಕಾಡಿನಲ್ಲಿಯೇ ಎಸೆದು ಹೋಗಿರಬಹುದು ಎಂದು ಹೇಳಲಾಗಿದೆ. ಇನ್ನೂ ಕಾಡಿನಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದ ಮಹಿಳೆಯನ್ನು ಕಂಡ ಕುರಿಗಾಹಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ಆಸ್ಪತ್ರೆಯಲ್ಲಿ ಮಹಿಳೆ ಚೇತರಿಸಿಕೊಂಡ ಬಳಿಕ ಪತಿಗೆ ಹಸ್ತಾಂತರಿಸಲಾಗಿದೆ.




ಇನ್ನೂ ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ನಡೆಸಲು ಉದಾಸೀನ ತೋರಿದ ವೇಳೆ ಮಹಿಳೆಯ ಪತಿಗೆ ಪೊಲೀಸರ ಮೇಲೆಯೇ ಅನುಮಾನ ಬಂದಿದ್ದು, ಅವರು ಪೋರ್ಟಲ್ ನಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಭಾನುವಾರ ರಾತ್ರಿ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಸಿಂಗ್ ಅವರು ತನಿಖೆ ನಡೆಸಲು ವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಇತ್ತೀಚಿನ ಸುದ್ದಿ