ಮ್ಯಾಟ್ರಿಮೋನಿ, ಶಾದಿ.ಕಾಂನಲ್ಲಿ ಮಹಿಳೆಯನ್ನು ಪರಿಚಯ ಮಾಡಿಕೊಂಡು ಈತ ಮಾಡಿದ್ದೇನು ಗೊತ್ತಾ?
28/11/2020
ಬೆಂಗಳೂರು: ಮ್ಯಾಟ್ರಿಮೋನಿ, ಶಾದಿ.ಕಾಂ ನಲ್ಲಿ ಮಹಿಳೆಯರ ಪರಿಚಯ ಮಾಡಿಕೊಂಡು ಬಳಿಕ ಅವರನ್ನು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ವೈನ್ರಾಜ್ ಕಿಶೋರ್ ಬಂಧಿತ ಆರೋಪಿಯಾಗಿದ್ದಾನೆ. ವಿವಾಹ ಸಂಬಂಧಿತ ಆ್ಯಪ್ ಗಳಲ್ಲಿ ಪರಿಚಯವಾಗಿ ಮದುವೆಯಾಗುವ ಆಮಿಷ ಹಾಕುತ್ತಿದ್ದ ಈತ ಬಳಿಕ ತನ್ನ ಕನ್ಸ್ಟ್ರಕ್ಷನ್ ವ್ಯವಹಾರಕ್ಕೆ ತುರ್ತು ಹಣದ ಅಗತ್ಯವಿದೆ ಎಂದು ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದ.
ಇತ್ತೀಚೆಗೆ ವೈಟ್ ಫೀಲ್ಡ್ ಮೂಲದ ಯುವತಿಗೆ ಮದುವೆಯಾಗುವುದಾಗಿ ಹೇಳಿ ಸುಮಾರು 24 ಲಕ್ಷ ಜಹಣ ಪಡೆದು ವಂಚಿಸಿದ್ದ. ಈ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ವೈಟ್ ಫೀಲ್ಡ್ ಸಿಇಎನ್ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.