ಮಹಿಷ ದುಷ್ಟನಲ್ಲ, ಮಹಿಷಾಸುರನ ದಸರಾ ಹಬ್ಬದ ಚಿಂತನೆ: ಜಯನ್ ಮಲ್ಪೆ
ಮಲ್ಪೆ: ಮುಂದಿನ ವರ್ಷ ಮಹಿಷ ಮಂಡಲದ ದೊರೆಯಾ ಮಹಿಷಾಸುರನನ್ನು ವೈದಿಕರು ದುಷ್ಟನೆಂದು ಸೃಷ್ಟಿಸಿರುವುದರ ವಿರುದ್ಧ ಉಡುಪಿಯಲ್ಲಿ ಅದ್ದೂರಿಯಾಗಿ ಮಹಿಷ ದಸರಾ ಹಬ್ಬ ಆಚರಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಸೋಮವಾರ ಮಲ್ಪೆಯ ಸರಸ್ವತಿ ಮಹಿಳಾ ಸಾಂಸ್ಕೃತಿಕ ಕಲಾ ತಂಡ ಏರ್ಪಡಿಸಿದ ನವರಾತ್ರಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಮಹಿಷ ಮಂಡಲವನ್ನು ಆಳ್ವಿಕೆ ಮಾಡಿದ್ದು ತೋಡ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಷಾಸುರ. ಆದರೆ ಇದೇ ಮಹಿಷಾಸುರನನ್ನು ದುಷ್ಟ, ಕಾಮಾಂಧ, ಜನವಿರೋಧಿ ಈತನ ಸಂಹಾರಕ್ಕಾಗಿಯೇ ಪಾರ್ವತಿಯು ಚಾಮುಂಡೇಶ್ವರಿಯ ಅವತಾರವೆತ್ತಿ ಬಂದು ಮಹಿಷಾಸುರನನ್ನು ಕೊಂದಿದ್ದು ಎನ್ನಲಾಗುತ್ತಿದೆ ಇದು ಸಂಪೂರ್ಣ ಕಟ್ಟುಕತೆ ಎಂದು ಜಯನ್ ಮಲ್ಪೆ ಹೇಳಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ನಡೆಯುವ ಪಿತೃಪಕ್ಷ ಹಬ್ಬದಾಚರಣೆಯು ಜನಪದೀಯ ನೆಲೆಗಳ ಮೂಲಕವೇ ಮಹಿಷನನ್ನು ಕಂಡುಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತಿ ಮಹಿಳಾ ಸಾಂಸ್ಕೃತಿಕ ಕಲಾತಂಡದ ಅಧ್ಯಕ್ಷೆ ಉಷಾ ಅಚ್ಚುತ್ತ ಮೆಂಡನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಾಸುದೇವ ಮಾಸ್ತರ್,ಸದಾನಂದ ಬಲರಾಮನಗರ,ಸುಧಾಕರ ಮೂಡಬೆಟ್ಟು ಮತ್ತು ಅಶ್ವಿನಿ ವಿಠಲ ಮಲ್ಪೆ ಉಪಸ್ಥಿತರಿದ್ದರು. ಪೂರ್ಣಿಮ ಸ್ವಾಗತಿಸಿ, ಗೀತಾ ವಂದಿಸಿದರು. ಭಗವನ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka