ಡ್ರಾಮ ದಂಗಲ್: ಮೈಕ್ ತೆಗೆಸದಿದ್ದರೆ ಸರ್ಕಾರದ ವಿರುದ್ಧ ಕಾನೂನು ಹೋರಾಟ | ಮುತಾಲಿಕ್ ಘೋಷಣೆ - Mahanayaka
3:34 PM Wednesday 11 - December 2024

ಡ್ರಾಮ ದಂಗಲ್: ಮೈಕ್ ತೆಗೆಸದಿದ್ದರೆ ಸರ್ಕಾರದ ವಿರುದ್ಧ ಕಾನೂನು ಹೋರಾಟ | ಮುತಾಲಿಕ್ ಘೋಷಣೆ

pramod muthalik
09/05/2022

ಮೈಸೂರು: ಸರ್ಕಾರದ ವಿರುದ್ಧ ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಮುಖ್ಯಮಂತ್ರಿಗಳನ್ನು, ಗೃಹ ಸಚಿವರನ್ನು ಕೋರ್ಟ್ ಗೆ ಎಳೆಯುತ್ತೇವೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದ ಶಿವರಾಂ ಪೇಟೆಯ ಶ್ರೀ ತ್ರಿಪುರ ಭೈರವಿ ಮಠದ ಶ್ರೀ ಆಂಜನೇಯ ಸ್ವಾಮಿ ಮಠದಲ್ಲಿ ಸುಪ್ರಭಾತ ಅಭಿಯಾನಕ್ಕೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಚಾಲನೆ ನೀಡಿ ಮಾಧ್ಯಮಗಳ ಜೊತೆಗೆ ಮಾತನಾಡಿದರು.

ಮಸೀದಿ ಮೇಲಿನ ಮೈಕ್ ತೆಗೆಸಲು ಸರ್ಕಾರಕ್ಕೆ ಗಡವು ನೀಡಿದ್ದೆವು. ಸರ್ಕಾರ ಈ ಬಗ್ಗೆ ಕ್ರಮ ಜರುಗಿಸಲಿಲ್ಲ. ಹೀಗಾಗಿ, ದೇವಾಲಯಗಳಲ್ಲಿ ಸುಪ್ರಭಾತಕ್ಕೆ ಚಾಲನೆ ನೀಡಿದ್ದೇವೆ. ಸರ್ಕಾರದ ವಿರುದ್ದ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಮುಸ್ಲಿಮರ ಸೊಕ್ಕು, ಹಠದಿಂದ ಜನರಿಗೆ ತೊಂದರೆ ಆಗುತ್ತಿದೆ. ಇದು ತಾಲಿಬಾನ್ ಅಲ್ಲ, ಪಾಕಿಸ್ತಾನ್ ಅಲ್ಲ. ಈ ರೀತಿ ಹಠ ಸರಿಯಲ್ಲ. ಸಂಘರ್ಷಕ್ಕೆ ನೀವೇ ಅವಕಾಶ ಮಾಡಿ ಕೊಡುತ್ತಿದ್ದೀರಿ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಸರ್ಕಾರ ಈ ಆಂದೋಲನ ಹತ್ತಿಕ್ಕುವ ಕೆಲಸವನ್ನುಸರ್ಕಾರ ಮಾಡುತ್ತಿದೆ.  ಮೈಕ್ ಹಾಕುವ ದೇವಸ್ಥಾನಗಳಿಗೆ ನೋಟಿಸ್ ನೀಡುತ್ತೀರಿ. ಮಸೀದಿಗೆ ಯಾಕೆ ಕೊಡಲ್ಲ..? ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಇರಲಿ. ಸುಪ್ರಭಾತ ಹಾಕಲು ಹೋದವರನ್ನು ಬಂಧನ ಮಾಡುತ್ತೀರಿ. ಇದು ನ್ಯಾಯಾನಾ?  ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಆಜಾನ್ ​ಗೆ ಅವಕಾಶ ಕೊಟ್ಟು ಸುಪ್ರೀಂಕೋರ್ಟ್ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡುತ್ತಿದ್ದೀರಾ? ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಗೃಹ ಮಂತ್ರಿಯನ್ನು ಹೊಣೆಗಾರರನ್ನಾಗಿ ಹೈಕೋರ್ಟ್ ನಲ್ಲಿ ಕಂಟೆಂಪ್ಟ್ ಆಫ್‌ ಕೋರ್ಟ್‌ ಅರ್ಜಿ ದಾಖಲಿಸುತ್ತೇವೆ. ನಾಳೆಯಿಂದ ನಮ್ಮ ಹೋರಾಟ ಮತ್ತಷ್ಟು ಉಗ್ರವಾಗುತ್ತದೆ  ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಮಾನವೀಯ ಘಟನೆ: ಸ್ಮಶಾನ ಅಗೆದು ವಿಕಲಚೇತನ ಬಾಲಕಿಯ ಮೃತದೇಹದ ಮೇಲೆ  ಅತ್ಯಾಚಾರ

ಮಾನನಷ್ಟ ಮೊಕದ್ದಮೆ  ಹಾಕಲು ಡಿ.ಕೆ.ಶಿವಕುಮಾರ್ ಗೆ ಮಾನ ಇದೆಯೇ? | ಯತ್ನಾಳ್ ಪ್ರಶ್ನೆ

ಸಿದ್ದರಾಮಯ್ಯ ಡ್ರಗ್ಸ್ ಹಣದಲ್ಲಿ ಸರ್ಕಾರ ನಡೆಸಿದರು: ನಳಿನ್ ಕುಮಾರ್ ಕಟೀಲ್ ವಾಗ್ದಾಳಿ

ಉಡುಪಿ: ಕಾಂಗ್ರೆಸ್ ತೊರೆದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಇತ್ತೀಚಿನ ಸುದ್ದಿ