ಮೊಣಕಾಲು ನೀರಿನಲ್ಲಿ ದೋಣಿಯಲ್ಲಿ ಕುಳಿತು ಮಾಜಿ ಸಿಂಗಂ ಅಣ್ಣಾಮಲೈಯಿಂದ ರಕ್ಷಣಾ ಕಾರ್ಯ! - Mahanayaka
1:18 PM Thursday 12 - December 2024

ಮೊಣಕಾಲು ನೀರಿನಲ್ಲಿ ದೋಣಿಯಲ್ಲಿ ಕುಳಿತು ಮಾಜಿ ಸಿಂಗಂ ಅಣ್ಣಾಮಲೈಯಿಂದ ರಕ್ಷಣಾ ಕಾರ್ಯ!

annamalai
10/11/2021

ಚೆನ್ನೈ: ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ, ಕರ್ನಾಟಕದ ಮಾಜಿ ಸಿಂಗಂ ಅಣ್ಣಾಮಲೈ ಅವರು ತಮಿಳುನಾಡಿನ ಭಾರೀ ಮಳೆಯ ಸಂದರ್ಭದಲ್ಲಿ ಮೊಣಕಾಲುವರೆಗಿನ ನೀರಿನಲ್ಲಿ ದೋಣಿಯಲ್ಲಿ ಸಂಚರಿಸಿ ರಕ್ಷಣಾ ಕಾರ್ಯ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಣ್ಣಾಮಲೈ ಇದೀಗ ನಗೆ ಪಾಟಲಿಗೀಡಾಗಿದ್ದಾರೆ.

ಚಂಡಮಾರುತದ ಪರಿಣಾಮ ತಮಿಳುನಾಡಿನಲ್ಲಿ ಭಾರೀ ಮಳೆಯಾಗಿತ್ತು. ಇನ್ನೂ ಎರಡು—ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಮಳೆಯಿಂದಾಗಿ ಮನೆಗಳು, ಕಟ್ಟಗಳಿಗೆ ನೀರು ನುಗ್ಗಿದ್ದು, ತಮಿಳುನಾಡು ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿಯೇ ಅಣ್ಣಾಮಲೈ ಅವರು ನಡೆಸಿರುವ ಹೈಡ್ರಾಮಾ ಇದೀಗ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಮೊಣಕಾಲು ನೀರಿನಲ್ಲಿ ದೋಣಿಯಲ್ಲಿ ಕುಳಿತಿರುವ ಅಣ್ಣಾಮಲೈ ಸುತ್ತ ಜನರು ನಡೆದು ಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಕಂಡು ಬಂದಿದೆ. ಈ ಸಂದರ್ಭ ಅಣ್ಣಾಮಲೈ ಸುತ್ತ ಇರುವ ಜನರನ್ನು ದೂರ ಕಳುಹಿಸುತ್ತಿರುವ ದೃಶ್ಯ ಕಂಡು ಬಂದಿದೆ. ಬಳಿಕ ಅಣ್ಣಾಮಲೈ ಅವರ ಫೋಟೋವನ್ನು ತೆಗೆದುಕೊಳ್ಳಲಾಗಿದೆ.

ಮೊಣಕಾಲು ನೀರಿನಲ್ಲಿ ದೋಣಿಯಲ್ಲಿ ಕುಳಿತು ತೆಗೆಸಿಕೊಂಡಿರುವ ಫೋಟೋವನ್ನು ಬಳಸಿಕೊಂಡು ತಮಿಳುನಾಡು ಬಿಜೆಪಿ ಸ್ಟಾಲಿನ್ ವಿರುದ್ಧ ಆಕ್ರೋಶ ಸೃಷ್ಟಿಸಲು ಯತ್ನಿಸಿತ್ತು. ಆದರೆ, ಯಾರೋ ಸಂಪೂರ್ಣ ವಿಡಿಯೋವನ್ನು ಹರಿಯಬಿಟ್ಟಿದ್ದು, ಇದರಿಂದಾಗಿ ಅಣ್ಣಾಮಲೈ ಅವರ ಬಂಡವಾಳ ಬೆಳಕಿಗೆ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಬಿಟ್ ಕಾಯಿನ್ ಹಗರಣದಲ್ಲಿ ಸಿಎಂ ತಲೆದಂಡ | ಪ್ರಿಯಾಂಕ್ ಖರ್ಗೆ

ಸ್ವಾಮೀಜಿಗಳ ಬರ್ಥ್ ಡೇ ಪ್ರಯುಕ್ತ 150ಕ್ಕೂ ಅಧಿಕ ಗಿಡಗಳಿಗೆ ಡೆತ್ ಡೇ ಭಾಗ್ಯ!

ಪುನೀತ್  ಬದಲು ನನ್ನನ್ನಾದರೂ ಕರೆಯಬಾರದಿತ್ತೇ? | ಪರಮಾತ್ಮ ನೀನು ಹೀಗೆ ಮಾಡಬಾರದಿತ್ತು | ಭಾವುಕರಾದ ಜನಾರ್ದನ ಪೂಜಾರಿ

ಇಂಟರ್ನ್ ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಇನ್ನೂ ಪತ್ತೆಯಾಗದ ಆರೋಪಿ ರಾಜೇಶ್ ಭಟ್!

ಪುನೀತ್ ಅಗಲಿಕೆ ಸಹಿಸದೇ ಕೈಯಲ್ಲಿ ಬರೆ ಎಳೆದು “ಅಪ್ಪು” ಹೆಸರು ಬರೆದುಕೊಂಡ ಅಭಿಮಾನಿ!

“ಅಲ್ಲಿ ಯಾರಿಗೂ ಕನ್ನಡ ಬರುತ್ತಿರಲಿಲ್ಲ” | ದೆಹಲಿಯಲ್ಲಾದ ಅನುಭವ ಹೇಳಿದ ವೃಕ್ಷಮಾತೆ ತುಳಸಿ ಗೌಡ

ಇಂಟರ್ನ್ ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಇನ್ನೂ ಪತ್ತೆಯಾಗದ ಆರೋಪಿ ರಾಜೇಶ್ ಭಟ್!

ಸ್ವಾಭಾವಿಕ ಸ್ವಭಾವ ಬೆಳೆಸಿಕೊಂಡ ಸತ್ಯದಪ್ಪೆ ಬೊಲ್ಲೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 05

ಇತ್ತೀಚಿನ ಸುದ್ದಿ