ಮಾಜಿ ಸಿಎಂ ಇದ್ದ ವೇದಿಕೆಗೆ ಕೇಸರಿ ಶಾಲು ಧರಿಸಿ, ಚಾಕು ಹಿಡಿದು ನುಗ್ಗಿದ ಮಾನಸಿಕ ಅಸ್ವಸ್ಥ! - Mahanayaka

ಮಾಜಿ ಸಿಎಂ ಇದ್ದ ವೇದಿಕೆಗೆ ಕೇಸರಿ ಶಾಲು ಧರಿಸಿ, ಚಾಕು ಹಿಡಿದು ನುಗ್ಗಿದ ಮಾನಸಿಕ ಅಸ್ವಸ್ಥ!

utharakanda
08/01/2022

ಉತ್ತರಾಖಂಡ: ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರಿದ್ದ ವೇದಿಕೆಗೆ ವ್ಯಕ್ತಿಯೋರ್ವ ಕೇಸರಿ ಶಾಲು ಧರಿಸಿ ಏರಿ ಬಂದು ಆತಂಕ ಸೃಷ್ಟಿಸಿದ ಘಟನೆ ಉಧಮ್ ಸಿಂಗ್ ನಗರದ ಕಾಶಿಪುರದಲ್ಲಿ ನಡೆದಿದೆ.

ಗುರುವಾರ ಸಂಜೆ ರಾಮಲೀಲಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಿಎಂ ಹರೀಶ್ ರಾವತ್ ಭಾಷಣ ಮುಗಿಸಿ ಕೆಳಗಿಳಿದರು. ಆಗ ಕೇಸರಿ ವಸ್ತ್ರಧಾರಿ ಪ್ರತಾಪುರ ನಿವಾಸಿ ವಿನೋದ್ ವೇದಿಕೆ ಏರಿದ. ಮೈಕ್ ಹಿಡಿದು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗತೊಡಗಿದ. ಕೂಡಲೇ ಕಾರ್ಮಿಕರು ಮೈಕ್ ಆಫ್ ಮಾಡಿ, ತಡೆದರು.

ಜೈಶ್ರೀರಾಮ್ ಘೋಷಣೆ ಮಾಡಲು ಬಿಡದ ಹಿನ್ನೆಲೆಯಲ್ಲಿ  ಕೋಪಗೊಂಡ ವಿನೋದ್ ಉದ್ದನೆಯ ಚಾಕು ತೆಗೆದುಕೊಂಡು ಜೈ ಶ್ರೀರಾಮ್ ಎಂದು ಹೇಳದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಘಟನೆ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಯುವಕನನ್ನು ಹಿಡಿದು ಚಾಕು ಕಸಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೂ ವಿನೋದ್ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದ್ದು, ಬಲಪಂಥೀಯ ಯೋಚನೆಗಳೊಂದಿಗೆ  ಈ ರೀತಿಯ ಕೃತ್ಯ ನಡೆಸುತ್ತಿದ್ದ ಎನ್ನಲಾಗಿದೆ. ಕೆಲವು ಸಮಯಗಳ ಹಿಂದೆ ಇಲ್ಲಿನ ಟವರ್ ಹತ್ತಿ, ಪ್ರಧಾನಿ ಮೋದಿ ತನ್ನೊಂದಿಗೆ ಮಾತನಾಡಬೇಕು ಎಂದು ಗಲಾಟೆ ನಡೆಸಿದ್ದ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೊರಗಜ್ಜನ ವೇಷ ಧರಿಸಿ ಅವಮಾನ:  ವ್ಯಾಪಕ ಖಂಡನೆ

ಕರ್ಫ್ಯೂ ನಡುವೆಯೇ ತೆರೆದ ಬಿಜೆಪಿ ಶಾಸಕರ ಒಡೆತನದ ಶಾಲೆ!

ಮೊಬೈಲ್ ನುಂಗಿದ ಕೈದಿ: ಜೈಲು ಅಧಿಕಾರಿಗಳ ಕಣ್ತಪ್ಪಿಸಲು ಹೋಗಿ ಯಡವಟ್ಟು

ಕುಲ್ಕುಂದದ ಜಾತ್ರೆ / ಎರುಕನಡನ ಬೇಟಿ/ ಕಾರಿ ಕಬಿಲ ಜೋಡಿ | ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 13

‘ಹರೀಶ ವಯಸ್ಸು 36’ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಹಾಡಿದ  ಹಾಡು ಬಿಡುಗಡೆ

 

ಇತ್ತೀಚಿನ ಸುದ್ದಿ