ಅಮಾನವೀಯ ಘಟನೆ: ಮಕ್ಕಳ ಹೆಸರಿಗೆ ಆಸ್ತಿ ಬರೆದ ಬಳಿಕ ತಂದೆಯನ್ನು ಕೋಣೆಯೊಳಗೆ ಬಂಧಿಸಿಟ್ಟ ಮಕ್ಕಳು! - Mahanayaka
6:59 AM Wednesday 11 - December 2024

ಅಮಾನವೀಯ ಘಟನೆ: ಮಕ್ಕಳ ಹೆಸರಿಗೆ ಆಸ್ತಿ ಬರೆದ ಬಳಿಕ ತಂದೆಯನ್ನು ಕೋಣೆಯೊಳಗೆ ಬಂಧಿಸಿಟ್ಟ ಮಕ್ಕಳು!

senior citizen
19/09/2021

ಪಾಲಕ್ಕಾಡ್:  ಮಕ್ಕಳ ಹೆಸರಿಗೆ ಆಸ್ತಿಯನ್ನು ಬರೆದ ಬಳಿಕ ಮಕ್ಕಳು ತಂದೆಯನ್ನು ಹೀನಾಯವಾಗಿ ನಡೆಸಿಕೊಂಡಿರುವ ಅಮಾನವೀಯ ಘಟನೆಯೊಂದು ಕೇರಳದ ಮನ್ನಾರ್ಕಾಡ್ ನಲ್ಲಿ ನಡೆದಿದ್ದು, ತಂದೆಯನ್ನು ಕೊಠಡಿಯೊಂದರಲ್ಲಿ 6 ತಿಂಗಳುಗಳಿಂದ ಬಂಧಿಸಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ತಂದೆಯಿಂದ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಮಕ್ಕಳು, ಹಾಸಿಗೆ ಹಿಡಿದ ತಂದೆಯನ್ನು ಸರಿಯಾಗಿ ನೋಡಿಕೊಳ್ಳದೇ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಪೊನ್ನು ಚೆಟ್ಟಿಯಾರ್ ಅವರು ತಮ್ಮ ಪತ್ನಿಯನ್ನು 2 ವರ್ಷಗಳ ಹಿಂದೆ ಕಳೆದುಕೊಂಡಿದ್ದರು. ಆ ಬಳಿಕ ಮಕ್ಕಳಾದ ಗಣೇಶನ್ ಹಾಗೂ ತಂಕಮ್ಮ ಜೊತೆಗೆ ಅವರು ವಾಸಿಸುತ್ತಿದ್ದರು. ಮಕ್ಕಳ ಹೆಸರಿಗೆ ತಂದೆ ಆಸ್ತಿಯನ್ನು ಬರೆದ ಬಳಿಕ ತಂದೆಯನ್ನು ಕೊಠಡಿಯೊಂದರಲ್ಲಿ ಬಂಧಿಸಿ, ಬೀಗ ಹಾಕಿ ಸರಿಯಾಗಿ ಊಟವೂ ನೀಡದೇ ಹಿಂಸಿಸುತ್ತಿದ್ದರು ಎಂದು ನೆರೆಹೊರೆಯವರು ಆರೋಪಿಸಿದ್ದಾರೆ.

ಇನ್ನೂ ನೆರೆಯವರು ಮಾಹಿತಿ ನೀಡಿದ ಬಳಿಕ ಆರೋಗ್ಯ ಇಲಾಖೆ, ಪೊಲೀಸರು ಮತ್ತು ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಬಂಧನದಲ್ಲಿದ್ದ ವೃದ್ಧನನ್ನು  ಬಿಡುಗಡೆ ಮಾಡಿದ್ದಾರೆ. ಮಕ್ಕಳ ಕಾರ್ಯಕ್ಕೆ ಇದೀಗ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಪತಿಯ ಇನ್ನೊಂದು ಮುಖ ಬಯಲಾಗುತ್ತಿದ್ದಂತೆಯೇ ನೇಣಿಗೆ ಶರಣಾದ 4 ತಿಂಗಳ ಗರ್ಭಿಣಿ

ಬೋರ್ ವೇಲ್ ಗೆ ಬಿದ್ದು ಮಗು ಸಾವು ಪ್ರಕರಣಕ್ಕೆ ತಿರುವು: ತಂದೆಯಿಂದಲೇ ನಡೆದಿತ್ತು ಹೀನ ಕೃತ್ಯ

ಮಗಳನ್ನು ಚುಡಾಯಿಸಬೇಡ ಎಂದಿದ್ದಕ್ಕೆ ಬಾಲಕಿಯ ತಂದೆಗೆ ಮಾರಣಾಂತಿಕ ಹಲ್ಲೆ!

12 ವರ್ಷಗಳ ಬಳಿಕ ಒಂದಾದ ತಾಯಿ ಮಗ | ವಿಶ್ವಾಸದ ಮನೆಯಲ್ಲೊಂದು ಭಾವನಾತ್ಮಕ ಸನ್ನಿವೇಶ

JCI: “ಕ್ಷಯ ಮುಕ್ತ ಭಾರತ” ಜಾಗೃತಿ ಮೂಡಿಸಲಿರುವ ‘ಹೆಜ್ಜೆ ಬದಲಾದಾಗ’ ಕಿರುಚಿತ್ರ

ಲಸಿಕಾ ಅಭಿಯಾನದ ವೇಳೆ ಆರೋಗ್ಯ ಸಿಬ್ಬಂದಿಯ ಮೇಲೆ ಮಹಿಳೆಯಿಂದ ಹಲ್ಲೆ!

ದೇವಾಲಯ ತೆರವು: ಸಂಸದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹಗೆ ಹಿಂದೂ ಕಾರ್ಯಕರ್ತರ ಮುತ್ತಿಗೆ

ಇತ್ತೀಚಿನ ಸುದ್ದಿ