11:30 AM Wednesday 12 - March 2025

ಅತ್ತೆ, ಮಕ್ಕಳ ಮುಂದೆಯೇ ಗರ್ಭಿಣಿ ದಲಿತ ಮಹಿಳೆಗೆ ಚಿತ್ರ ಹಿಂಸೆ ನೀಡಿ ಅತ್ಯಾಚಾರ

dalith
30/05/2021

ಭೋಪಾಲ್ / ಸಾಗರ್: ಪತಿ ಮರ ಕಡಿಯಲು ಬರಲಿಲ್ಲ ಎಂದು ಆತನ ಗರ್ಭಿಣಿ ಪತ್ನಿ, ಅತ್ತೆ ಹಾಗೂ ಪುಟ್ಟ ಮಕ್ಕಳನ್ನು ಅಪಹರಿಸಿ ವ್ಯಕ್ತಿಯೋರ್ವ ಗರ್ಭಿಣಿಯನ್ನು ಅತ್ಯಾಚಾರ ನಡೆಸಿ, ಭೀಕರವಾದ ಹಲ್ಲೆಗಳನ್ನು ನಡೆಸಿರುವ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಿಂದ 350 ಕಿ.ಮೀ. ದೂರ ಇರುವ  ಛತ್ತರ್ ಪುರದಲ್ಲಿ ನಡೆದಿದೆ.

32 ವರ್ಷ ವಯಸ್ಸಿನ ದಲಿತ ಯುವಕನೋರ್ವನನ್ನು ಆರೋಪಿಯು, ತನ್ನ ಜಮೀನನಲ್ಲಿರುವ ಮರಗಳನ್ನು ಕತ್ತರಿಸಲು ಹೇಳಿದ್ದಾನೆ. ಆದರೆ ತನಗೆ ಆರೋಗ್ಯ ಸರಿ ಇಲ್ಲ, ಇನ್ನೊಂದು ದಿನ ಈ ಕೆಲಸ ಮಾಡುತ್ತೇನೆ ಎಂದು ದಲಿತ ಯುವಕ ಮನವಿ ಮಾಡಿಕೊಂಡಿದ್ದಾನೆ. ಇದರಿಂದ ಆಕ್ರೋಶಕ್ಕೀಡಾದ ಆರೋಪಿ ದಲಿತ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ವೇಳೆ ದಲಿತ ಯುವಕ ಹೇಗೋ, ಆತನ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ.

ದಲಿತ ಯುವಕ ತಪ್ಪಿಸಿಕೊಂಡ ಬಳಿಕ ಆರೋಪಿಯು ನೇರವಾಗಿ ದಲಿತ ಯುವಕನ ಮನೆಗೆ ಬಂದು, ಆತನ ಗರ್ಭಿಣಿ ಪತ್ನಿ, ಅತ್ತೆ ಮತ್ತು ಇಬ್ಬರು ಮಕ್ಕಳನ್ನು ಅಪಹರಿಸಿದ್ದಾನೆ. ಬಳಿಕ ಗರ್ಭಿಣಿ ಮಹಿಳೆ ಹಾಗೂ ಮಕ್ಕಳು ಎಂದೂ ನೋಡದೇ ಥಳಿಸಿದ್ದು, ಮಹಿಳೆಯ ಮೇಲೆ ಅತ್ಯಾಚಾರ  ನಡೆಸಲಾಗಿದೆ. ಒಟ್ಟು ನಾಲ್ಕು ದಿನಗಳ ಕಾಲ ಮಹಿಳೆಯರು  ಹಾಗೂ ಮಕ್ಕಳನ್ನು ಹಿಂಸಿಸಲಾಗಿದೆ.

ಈ ಘಟನೆಯ ಮಾಹಿತಿ ತಿಳಿದ ಸ್ಥಳೀಯ ಪತ್ರಕರ್ತರೋರ್ವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಇದರಿಂದಾಗಿ ಈ ಪ್ರಕರಣ ಬಯಲಾಗಿದೆ.  ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯಿಂದ ಮಹಿಳೆಯರು ಹಾಗೂ ಮಕ್ಕಳನ್ನು ರಕ್ಷಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳ ಮೇಲೆ  ಎಫ್ ಐಆರ್ ದಾಖಲಿಸಿದ್ದು, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ, ಹಲ್ಲೆ ಮೊದಲಾದ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಸಂತ್ರಸ್ತ ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಮಹಿಳೆ ಹೇಳಿಕೆ ನೀಡಿಲ್ಲ, ಆದರೂ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪ್ರಕರಣಗಳನ್ನು ನಾವು ದಾಖಲಿಸುತ್ತೇವೆ ಎಂದು ಠತಾರ್‌ಪುರದ ಪೊಲೀಸ್ ಅಧೀಕ್ಷಕ ಸಚಿನ್ ಶರ್ಮಾ ತಿಳಿಸಿದ್ದಾರೆ.

ಮಹಿಳೆಯ ಮೈತುಂಬಾ ಗಾಯಗಳಾಗಿದ್ದು, ತೀವ್ರವಾಗಿ ಹಿಂಸಿರುವುದು ಕಂಡು ಬಂದಿದೆ.  ಸತತ ನಾಲ್ಕು ದಿನಗಳ ಕಾಲ ಮಹಿಳೆಯ ಮೇಲೆ ಗಂಭೀರವಾದ ಹಲ್ಲೆ ನಡೆಸಲಾಗಿದೆ. ಮಹಿಳೆ ತೀವ್ರವಾಗಿ ಭಯಭೀತಿಯಿಂದಿರುವ ಕಾರಣ ಹೆಚ್ಚಿನ ಹೇಳಿಕೆಗಳನ್ನು ನೀಡಿಲ್ಲ ಎಂದು ಹೇಳಲಾಗಿದೆ. ಇನ್ನಷ್ಟು ಮಾಹಿತಿಗಳನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version