ಮಕ್ಕಳಾಗುತ್ತಿಲ್ಲ, ಪರಿಹಾರ ತಿಳಿಸಿ ಎಂದು ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ಮಾಟಗಾರ! - Mahanayaka
1:09 AM Wednesday 11 - December 2024

ಮಕ್ಕಳಾಗುತ್ತಿಲ್ಲ, ಪರಿಹಾರ ತಿಳಿಸಿ ಎಂದು ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ಮಾಟಗಾರ!

women
14/08/2021

ಅಹ್ಮದಾಬಾದ್: ಮಕ್ಕಳಾಗುತ್ತಿಲ್ಲ, ಪರಿಹಾರ ತಿಳಿಸಿ ಎಂದು ಮಾಟಗಾರನ ಬಳಿಗೆ ತೆರಳಿದ ಮಹಿಳೆಯನ್ನು ಮಾಟಗಾರ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಗುಜರಾತ್ ನಲ್ಲಿ ನಡೆಸಿದ್ದು, ಇದೀಗ ನೊಂದ ಮಹಿಳೆ ಪೊಲೀಸರ ಮೊರೆ ಹೋಗಿದ್ದಾರೆ.

8 ವರ್ಷದ ಹಿಂದೆ ಮದುವೆಯಾದರೂ ಮಹಿಳೆಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ತನಗೆ ಮಕ್ಕಳಾಗಲು ಏನು ಮಾಡಬೇಕು ಎಂಬ ಬಗ್ಗೆ ಮಹಿಳೆ ತಮ್ಮ ಸ್ನೇಹಿತೆಯೊಂದಿಗೆ ಚರ್ಚಿಸಿದಾಗ ಇಮ್ತಿಯಾಜ್ ಎಂಬ ಮಾಟಗಾರನ ಬಳಿ ಪರಿಹಾರ ಕೇಳಿದರೆ, ಮಕ್ಕಳಾಗುತ್ತವೆ ಎಂದು ಆಕೆಯ ಸ್ನೇಹಿತೆಯೊಬ್ಬಳು ಹೇಳಿದ್ದಾಳೆ ಎಂದು ಹೇಳಲಾಗಿದೆ.

ಸ್ನೇಹಿತೆಯ ಮಾತು ಕೇಳಿ ಮಾಟಗಾರನ ಬಳಿಗೆ ಮಹಿಳೆ ಹೋಗಿದ್ದು, ಈ ವೇಳೆ ಮಾಟಗಾರ, “ನಿನಗೆ ಮಕ್ಕಳಾಗಬೇಕಾದರೆ, ನೀನು ಬೇರೊಬ್ಬನ ಜೊತೆಗೆ ಲೈಂಗಿಕ ಕ್ರಿಯೆ ನಡೆಸಬೇಕು ಎಂದು ಪರಿಹಾರ ಹೇಳಿದ್ದು, ಜೊತೆಗೆ ನೀನು ಲಾಡ್ಜ್ ಗೆ ಬಾ ನನ್ನ ಜೊತೆಗೆ ಲೈಂಗಿಕ ಕ್ರಿಯೆ ನಡೆಸು ನಿನಗೆ ಮಕ್ಕಳಾಗುತ್ತದೆ ಎಂದು ಪರಿಹಾರ ನೀಡಿದ್ದಾನೆ.

ಮಾಟಗಾರನ ಮಾತು ಕೇಳಿ ಬೆಚ್ಚಿಬಿದ್ದ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ. ಮಾಟದಿಂದ, ಮಂತ್ರದಿಂದ ಮಕ್ಕಳಾಗುವುದಿಲ್ಲ ಎನ್ನುವ ಸತ್ಯ ಮಂತ್ರವಾದಿಗಳಿಗೆ ಗೊತ್ತಿದೆ. ಆದರೆ, ಜನರಲ್ಲಿರುವ ಮೌಢ್ಯತೆಯನ್ನು ಬಳಸಿಕೊಂಡು, ಮೋಸ ಮಾಡುವವರನ್ನು ನಂಬುವ ಜನರು ಪ್ರತಿಬಾರಿಯೂ ಇಂತಹವರಿಂದ ಮೋಸ ಹೋಗುತ್ತಲೇ ಇರುತ್ತಾರೆ.

ಇನ್ನಷ್ಟು ಸುದ್ದಿಗಳು…

ವಾಜಪೇಯಿ ಮದ್ಯ, ಮಾಂಸ ಪ್ರಿಯರು, ಸಾರ್ವರ್ಕರ್ ಬಾರ್ ಎಂದು ಹೆಸರಿಡುತ್ತಾರೆಯೇ? | ಸಿ.ಟಿ.ರವಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಬಿಗ್ ಬಾಸ್ ಸೀಸನ್ 8 ಮುಗಿದ ಬೆನ್ನಲ್ಲೇ ಮತ್ತೆ 7 ದಿನಗಳವರೆಗೆ ನಡೆಯಲಿದೆ ಬಿಗ್ ಬಾಸ್ ಕಾರ್ಯಕ್ರಮ!

ಬಿಜೆಪಿ ಕಾರ್ಯಕರ್ತ ಸೇರಿದಂತೆ ಇಬ್ಬರಿಂದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ!

ತಾಯಿಯ ಕಣ್ಣೆದುರೇ ಇಬ್ಬರು ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ದುಷ್ಟರು!

ಕಾಂಗ್ರೆಸ್ ನವರು ಬೇಕಿದ್ದರೆ ‘ನೆಹರೂ ಹುಕ್ಕಾ ಬಾರ್’ ತೆರೆಯಲಿ: ಸಿ.ಟಿ.ರವಿ ಹೇಳಿಕೆ

ಇತ್ತೀಚಿನ ಸುದ್ದಿ