ಶಾಕಿಂಗ್ ನ್ಯೂಸ್: ಅತೀ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಕೊರೊನಾ ವೈರಸ್! - Mahanayaka

ಶಾಕಿಂಗ್ ನ್ಯೂಸ್: ಅತೀ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಕೊರೊನಾ ವೈರಸ್!

covid test
10/08/2021

ಅಮೇರಿಕ: ಅಮೆರಿಕದಲ್ಲಿ ಕೊರೊನಾ ಸೋಂಕು ದೊಡ್ಡವರಿಗಿಂತಲೂ ಹೆಚ್ಚು ಮಕ್ಕಳಲ್ಲಿ ಕಂಡು ಬಂದಿದ್ದು,  ಅತೀ ಹೆಚ್ಚಿನ ಸಂಖ್ಯೆಯ ಮಕ್ಕಳಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಈ ವಿಚಾರವನ್ನು ಸ್ವತಃ ತಜ್ಞರೇ ಹೇಳಿದ್ದು, ಅಮೆರಿಕಾದಲ್ಲಿ ದಿನದಿಂದ ದಿನಕ್ಕೆ ಕೊವಿಡ್ 19 ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಾಧ್ಯಮಗಳ ಮಾಹಿತಿಯ ಪ್ರಕಾರ, ಯಾವ ಪ್ರದೇಶದಲ್ಲಿ ಲಸಿಕೆ ಪಡೆದುಕೊಳ್ಳುವ ಸಂಖ್ಯೆ ಕಡಿಮೆ ಇದೆಯೋ ಆ ಪ್ರದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗಿದೆ.  ಜುಲೈ ಆರಂಭದಿಂದ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ ಎಂದು ಟೆಕ್ಸಾಸ್ ಮಕ್ಕಳ ಆಸ್ಪತ್ರೆಯ ಮಕ್ಕಳ ವೈದ್ಯ ಡಾ.ಜೇಮ್ಸ್ ವರ್ಸಲೋವಿಕ್ ಹೇಳಿದ್ದಾರೆ.

ಅಮೆರಿಕಾದಲ್ಲಿ ಕೊರೊನಾ ನಾಲ್ಕನೆ ಅಲೆ ಆರಂಭವಾಗಿದ್ದು,  ಡೆಲ್ಟಾ ರೂಪಾಂತರವು ಅಮೆರಿಕದಾದ್ಯಂತ ಹರಡಿದೆ. ಇದು ಅತ್ಯಂತ ವೇಗವಾಗಿ ಹರಡುವ ರೂಪಾಂತರಿ ವೈರಸ್ ಆಗಿದೆ.  ಡೆಲ್ಟಾ ರೂಪಾಂತರವು ಶೇ.90ರಷ್ಟು ಮಕ್ಕಳನ್ನು ಕೊರೊನಾ ಸೋಂಕಿಗೊಳಪಡಿಸಿದೆ.

12 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಅಮೆರಿಕಾದಲ್ಲಿ ಇನ್ನೂ ಲಸಿಕೆ ಲಭ್ಯವಾಗಿಲ್ಲ.  12 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಆರಂಭವಾಗಿದ್ದರೂ, ಬಹುತೇಕ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿಲ್ಲ. ಹೀಗಾಗಿ ಕೊರೊನಾ ಡೆಲ್ಟಾ ರೂಪಾಂತರವು ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತಿದೆ.

ಇನ್ನೂ ಭಾರತದಲ್ಲಿ ಎರಡನೇ ಅಲೆ ತೀವ್ರ ಹಾನಿಗೊಳಿಸಿದ ಬಳಿಕ ಇದೀಗ ಮೂರನೇ ಅಲೆ ಭೀತಿ ಸೃಷ್ಟಿಯಾಗಿದೆ. ತಜ್ಞರ ಪ್ರಕಾರ ಮೂರನೇ ಅಲೆ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ, ಸಾರ್ವಜನಿಕವಾಗಿ ನಿರ್ಲಕ್ಷ್ಯದ ಪರಮಾವಧಿಯೇ ಕಂಡು ಬರುತ್ತಿದೆ. ಒಂದೆಡೆ ಜೀವ ಇನ್ನೊಂದಡೆ ಜೀವನೋಪಾಯ ಈ ಎರಡು ವಿಚಾರಗಳನ್ನು ನಿಭಾಯಿಸಲು ಸರ್ಕಾರ ಕೂಡ ವಿಫಲವಾಗಿದೆ. ಹೀಗಾಗಿ ಜನರು ಅಲಾರ್ಟ್ ಆಗಿರಬೇಕು ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ.

ಇನ್ನಷ್ಟು ಸುದ್ದಿಗಳು…

“ಮಾತಾಡಿ ಪ್ರಧಾನಿಗಳೇ ಮಾತನಾಡಿ” | ಆ.10ರಿಂದ 15ರವರೆಗೆ ಆನ್ ಲೈನ್ ಅಭಿಯಾನ

“ಲವ್ ಯೂ ರಚ್ಚು” ಚಿತ್ರದ ಶೂಟಿಂಗ್ ವೇಳೆ ಅವಘಡ | ಓರ್ವ ಸಾವು, ಇನ್ನೋರ್ವನಿಗೆ ಗಾಯ | ನಟ ಅಜಯ್ ರಾವ್ ಆಕ್ರೋಶ

ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ಮನೆಗೆ ಕರೆಸಿ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದ ಅತ್ಯಾಚಾರ, ಬ್ಲ್ಯಾಕ್ ಮೇಲ್

ಒಂದಕ್ಕೆ ಎರಡು ತೆಗೆದು ಬಿಡಿ ಅನ್ನೋವಷ್ಟು ಬಿಜೆಪಿ ಬೆಳೆದಿದೆ |  ಸಚಿವ ಕೆ.ಎಸ್.ಈಶ್ವರಪ್ಪ

ದಾಳಿಂಬೆ ಹಣ್ಣಿನ ರಸ ಸೇವಿಸಿ, ಈ ರೋಗಗಳಿಂದ ಮುಕ್ತಿ ಪಡೆಯಿರಿ!

ಇತ್ತೀಚಿನ ಸುದ್ದಿ