ಪ್ರಿಯಕರ ಜೊತೆ ಓಡಿ ಹೋದ ಪತ್ನಿ ಮೇಲಿನ ಕೋಪದಿಂದ ಇಬ್ಬರು ಮಕ್ಕಳನ್ನು ಕೊಂದ ಪಾಪಿ - Mahanayaka

ಪ್ರಿಯಕರ ಜೊತೆ ಓಡಿ ಹೋದ ಪತ್ನಿ ಮೇಲಿನ ಕೋಪದಿಂದ ಇಬ್ಬರು ಮಕ್ಕಳನ್ನು ಕೊಂದ ಪಾಪಿ

kalaburgi
01/07/2022

ಕಲಬುರಗಿ: ಮಕ್ಕಳು ಮತ್ತು ಗಂಡನನ್ನು ಬಿಟ್ಟು ಪ್ರಿಯಕರನ ಜೊತೆಗೆ ಓಡಿಹೋದ ಪತ್ನಿಯ ಕೃತ್ಯದಿಂದ  ಆಕ್ರೋಶಗೊಂಡ ತಂದೆಯೋರ್ವ ತನ್ನ ಇಬ್ಬರು  ಅಮಾಯಕ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ನಗರದ ವೀರೆಂದ್ರ ಪಾಟೀಲ್ ಬಡಾವಣೆ ಬಳಿ ನಡೆದಿದೆ.

ತಂದೆ ಲಕ್ಷ್ಮಿಕಾಂತ್ ಎಂಬಾತ ಪತ್ನಿಯ ಮೇಲಿನ ಸಿಟ್ಟನ್ನು ಮಕ್ಕಳ ಮೇಲೆ ತೋರಿಸಿದ್ದು, 11 ವರ್ಷ ವಯಸ್ಸಿನ ಸೋನಿ  ಮತ್ತು 9 ವರ್ಷ ವಯಸ್ಸಿನ ಮಯೂರಿಯನ್ನು ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಆಟೋ ಚಾಲಕನಾಗಿರುವ ಲಕ್ಷ್ಮಿಕಾಂತ್ ನ ಪತ್ನಿ ನಾಲ್ಕು ತಿಂಗಳ ಹಿಂದೆ ಪ್ರಿಯಕರನ ಜೊತೆಗೆ ಓಡಿ ಹೋಗಿದ್ದಳು. ಪತ್ನಿಯ ಮೇಲಿನ ಸಿಟ್ಟಿನಲ್ಲಿ ಕಂಠಮಟ್ಟ ಕುಡಿದು ಬಂದ ಲಕ್ಷ್ಮೀಕಾಂತ್ ರಾತ್ರಿ ವೇಳೆ ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮರು ದಿನ ಬೆಳಗ್ಗೆ ಮಕ್ಕಳ ಮೃತದೇಹವನ್ನು ಆಟೋ ರಿಕ್ಷಾದಲ್ಲಿ  ಇಟ್ಟುಕೊಂಡು ಮಧ್ಯಾಹ್ನದ ವರೆಗೆ ಆಟೋದಲ್ಲಿ ತಿರುಗಾಡಿ ಬಳಿಕ  ಕಲಬುರಗಿ ನಗರದ ಮಹಾತ್ಮಾ ಬಸವೇಶ್ವರ ಠಾಣೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಾನು ಅಪ್ಪು ಸರ್ ಅವರ 5 ಪರ್ಸೆಂಟ್ ನಷ್ಟೂ ಇಲ್ಲ: ತಮಿಳು ಯುವನಟ ಆರ್ಯ

ಭಾರೀ ಮಳೆ ಹಿನ್ನೆಲೆ: ನಾಳೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ

ಮಂಗಳೂರಿನಲ್ಲಿ ಕೃತಕ ನೆರೆ: ಶಾಲಾ ವಾಹನ ಚಾಲಕರ ಪಾಡು ಹೇಳತೀರದು!

ಗ್ರಾಹಕರ ವೇಷದಲ್ಲಿ ಬಂದು ಕತ್ತು ಕೊಯ್ದರು: ಬೆಚ್ಚಿಬೀಳಿಸಿದ ಟೈಲರ್ ಹತ್ಯೆಯ ವಿಡಿಯೋ

ಇತ್ತೀಚಿನ ಸುದ್ದಿ