ಮಕ್ಕಳನ್ನು ಮನೆಯಲ್ಲಿಯೇ ಬಂಧಿಸಿದ ತಾಯಿ: ಮಕ್ಕಳ ಅಳು ಕೇಳಲಾರದೇ ಸ್ಥಳೀಯರಿಂದ ದೂರು

lockd home
06/12/2021

ಹಾವೇರಿ: ತನ್ನ 5 ಹಾಗೂ 3 ವರ್ಷದ ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ ತಾಯಿ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗುತ್ತಿದ್ದ ಘಟನೆ ಹಾವೇರಿ ಜಿಲ್ಲೆಯ ಸವಣೂರಿನ ಮಂಗಳವಾರ ಪೇಟೆಯಲ್ಲಿ ನಡೆದಿದ್ದು, ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ  ಸ್ಥಳಕ್ಕೆ ಆಗಮಿಸಿದ ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿಗಳು ಮಕ್ಕಳನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.

ಮಂಗಳವಾರ ಪೇಟೆ ನಿವಾಸಿ ಶಾರದಾ ಕಮ್ಮಾರ ಎಂಬವರು ಬೆಳಗ್ಗೆ 7ರಿಂದ ಸಂಜೆ 7ರವರೆಗೂ ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ ಕೆಲಸಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಮಕ್ಕಳು ಅಳುವುದನ್ನು ಕೇಳಲಾಗದೇ ಸ್ಥಳೀಯರು 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಈ ವೇಳೆ ತಕ್ಷಣವೇ ಕಾರ್ಯಪ್ರವೃತ್ತರಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪೊಲೀಸ್ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕದ ತಂಡ ಮನೆಯಲ್ಲಿ ಕೂಡಿ ಹಾಕಲ್ಪಟ್ಟಿದ್ದ ಮಕ್ಕಳ ಜೊತೆಗೆ ಕಿಟಕಿಯ ಮೂಲಕ ಮಾತನಾಡಿಸಿದ್ದು, ಈ ವೇಳೆ ಹೆಣ್ಣು ಮಗು ಮಾತನಾಡಿ, ಅಪ್ಪ ನಮ್ಮ ಜೊತೆಗೆ ಇಲ್ಲ, ಅಮ್ಮ ಮತ್ತು ಮನೆಯಲ್ಲಿ ಇರುವ ಅಂಕಲ್ ಹೊಡೆಯುತ್ತಾರೆ. ಮನೆಯಲ್ಲಿ ಕೂಡಿ ಹಾಕಿ ಹೋಗುತ್ತಾರೆ. ಯಾರಿಗಾದರೂ ಹೇಳಿದರೆ ಮತ್ತಷ್ಟು ಹೊಡೆಯುತ್ತಾರೆ ಎಂದು ಕಣ್ಣೀರು ಹಾಕಿದೆ.

ಈ ಬಗ್ಗೆ ಶಾರದಾ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಅವರು ಹಾರಿಕೆಯ ಉತ್ತರ ನೀಡಲು ಯತ್ನಿಸಿದ್ದಾರೆ. ಈ ವೇಳೆ ತಕ್ಷಣವೇ ಸ್ಥಳಕ್ಕೆ ಬರುವಂತೆ  ಎಎಸ್ ಐ ಗೀತಾ ತಿರುಮಲೆ ಹೇಳಿದ್ದು, ಬಳಿಕ ಮಕ್ಕಳನ್ನು ಹಾವೇರಿ ಜಿಲ್ಲಾ ಸ್ಪಂದನಾ ವಿಶೇಷ ದತ್ತು ಸ್ವೀಕಾರ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಾಲಾ, ಕಾಲೇಜುಗಳಲ್ಲಿ ಕೊವಿಡ್ ಹೆಚ್ಚಳ: ಶಾಲಾ ಕಾಲೇಜುಗಳು ಮತ್ತೆ ಬಂದ್ ಆಗುತ್ತಾ?

ಪುನೀತ್ ರಾಜ್ ಕುಮಾರ್ ನಟನೆಯ ‘ಗಂಧದ ಗುಡಿ’ ಟೀಸರ್ ಬಿಡುಗಡೆ: ವಿಡಿಯೋ ನೋಡಿ

ಐವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ!

ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಮೊಟ್ಟೆ ನೀಡುತ್ತಿದೆ | ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ

ನವಜಾತ ಶಿಶುವನ್ನು ಪೊದೆಗೆ ಎಸೆದು ಹೋಗಿದ್ದ ಪೋಷಕರ ಬಂಧನ

ಇತ್ತೀಚಿನ ಸುದ್ದಿ

Exit mobile version