ಮಕ್ಕಳಿಗೆ ಕೊವಿಡ್ ಲಸಿಕೆ ಹಾಕಲು ಆತುರಬೇಡ: ತಜ್ಞರು ಹೀಗೆ ಹೇಳಿದ್ದೇಕೆ?
ನವದೆಹಲಿ: ನಿಖರವಾದ ಮಾಹಿತಿ ಮತ್ತು ಸುರಕ್ಷತಾ ಭರವಸೆ ಇಲ್ಲದ ಹೊರತು ಮಕ್ಕಳಿಗೆ ಲಸಿಕೆ ಹಾಕಲು ಆತುರ ಬೇಡ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ವರದಿಯಾಗಿದ್ದು, ದೇಶದಲ್ಲಿ 100 ಕೋಟಿ ಕೊವಿಡ್ ಡೋಸ್ ನೀಡಿರುವ ಬೆನ್ನಲ್ಲೇ ಮಕ್ಕಳಿಗೂ ಲಸಿಕೆ ನೀಡಲು ತಯಾರಿ ನಡೆಸಲಾಗುತ್ತಿದ್ದು, ಈ ನಡುವೆ ತಜ್ಞರು ಈ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಔಷಧ ನಿಯಂತ್ರಣ ಪ್ರಾಕಾರದ ವಿಷಯ ತಜ್ಞರ ಸಮಿತಿ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ನೀಡಲು ಅಕ್ಟೋಬರ್ 12ರಂದು ಅಂಗೀಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮವೊಂದು ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ಬಹಳಷ್ಟು ಮಂದಿ ಮಕ್ಕಳಿಗೆ ಲಸಿಕೆ ನೀಡಲು ಆತುರ ಬೇಡ ಎಂಬ ಸಲಹೆ ನೀಡಿದ್ದಾರೆ.
ಈವರೆಗೆ ಲಭ್ಯ ಇರುವ ಪುರಾವೆಗಳ ಪ್ರಕಾರ ಮಕ್ಕಳ ಲಸಿಕೆಯಲ್ಲಿ ಅಲ್ಪಾವಧಿ ಸುರಕ್ಷೆ ಬಗ್ಗೆ ಖಚಿತತೆ ಇದೆ. ಆದರೆ ದೀರ್ಘಾವ ಸುರಕ್ಷತೆಯ ಬಗ್ಗೆ ಮಾಹಿತಿ ಇಲ್ಲ. ಸುರಕ್ಷತೆ ಖಾತ್ರಿಯಾಗದ ಹೊರತು ಯಾವುದೇ ರಾಜಿ ಬೇಡ. ಲಸಿಕೆ ನೀಡಲು ಆತುರ ಬೇಡ ಎಂದು ಸಾರ್ವಜನಿಕ ಆರೋಗ್ಯ ಫೌಂಡೇಷನ್ ಅಧ್ಯಕ್ಷ ಡಾ.ಕೆ.ಶ್ರೀಕಾಂತ್ ರೆಡ್ಡಿ ಹೇಳಿದ್ದಾರೆ.
ವೆಲ್ಲೂರು ಕ್ರಿಶ್ಚಿಯನ್ ಕಾಲೇಜು ಪ್ರಾಧ್ಯಾಪಕರು ಹಾಗೂ ಲಸಿಕೆಯ ತಜ್ಞರಾದ ಡಾ.ಗಗನ್ ದೀಪ್ ಕಂಗ್ ಅವರು, ಉತ್ತರ ಇಲ್ಲದ ಬಹಳಷ್ಟು ಪ್ರಶ್ನೆಗಳು ಉಳಿದಿವೆ. 12 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಮೊದಲು ಭಾರತ ಇವುಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಯಾವುದೇ ಕ್ರಮ ಕೈಗೊಳ್ಳುವ ಮೊದಲು, ಮಕ್ಕಳಿಗೆ ಯಾಕೆ ಮತ್ತು ಯಾವ ಲಸಿಕೆಯನ್ನು ನೀಡಬೇಕು ಎಂಬ ಬಗ್ಗೆ ಸ್ಪಷ್ಟತೆ ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.
ನಿಷ್ಕ್ರೀಯ ವೈರಾಣುಗಳ ಲಸಿಕೆ ನೀಡಬೇಕೆ ಅಥವಾ ಎಂಆರ್ ಎನ್ ಎ ಲಸಿಕೆಗಾಗಿ ಕಾಯಬೇಕೆ ಎಂಬುವು ಸೇರಿದಂತೆ ಅನೇಕ ಪ್ರಶ್ನೆಗಳಿವೆ. ಇವುಗಳಿಗೆ ನಿಖರ ಉತ್ತರ ಕಂಡುಕೊಳ್ಳಬೇಕು. ಈಗ ಲಭ್ಯ ಇರುವ ಲಸಿಕೆಯ ಸಾಮರ್ಥ್ಯ ಏನು ಎಂಬುದು ಸ್ಪಷ್ಟವಾಗಿಲ್ಲ. ಸಮರ್ಥನಿಯವಾದಷ್ಟು ಅಂಕಿ ಅಂಶಗಳು ಲಭ್ಯ ಇಲ್ಲದ ಹೊರತು ಲಸಿಕೆ ಹಾಕಲು ಆತುರ ಬೇಡ ಎಂದಿದ್ದಾರೆ ಎಂದು ಕಂಗ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ದಲಿತ ಬಾಲಕಿಯ ಅತ್ಯಾಚಾರ: ಆರೆಸ್ಸೆಸ್ ಮುಖಂಡನ ವಿರುದ್ಧ ದಲಿತ ಸಂಘಟನೆಗಳಿಂದ ಪ್ರತಿಭಟನೆ
ಯಾವ ಸಾಧನೆಗೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ? | ಕೇಂದ್ರ ಸರ್ಕಾರದ ಕಿವಿ ಹಿಂಡಿದ ಸಿದ್ದರಾಮಯ್ಯ
ಕರಂಗೋಲು ಪಾಡ್ದನದ ಧಾರ್ಮಿಕತೆ, ಐತಿಹಾಸಿಕ ನೆಲೆಗಳ ಅರ್ಥ