3-2 ವರ್ಷದ ಇಬ್ಬರು ಮಕ್ಕಳಿಗೆ ವಿಷವುಣಿಸಿ ದಂಪತಿ ನೇಣಿಗೆ ಶರಣು - Mahanayaka
1:21 PM Wednesday 5 - February 2025

3-2 ವರ್ಷದ ಇಬ್ಬರು ಮಕ್ಕಳಿಗೆ ವಿಷವುಣಿಸಿ ದಂಪತಿ ನೇಣಿಗೆ ಶರಣು

06/01/2021

ಹೊಸಪೇಟೆ: ಮಕ್ಕಳಿಗೆ ವಿಷ ಉಣಿಸಿ ದಂಪತಿ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ  ಬಳ್ಳಾರಿಯ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ನಡೆಸಿದ್ದು,  ಆತ್ಮಹತ್ಯೆಗೂ ಮನ್ನ ದಂಪತಿ ಡೆತ್ ನೋಟ್ ಬರೆದಿಟ್ಟಿದ್ದಾರೆ.

ನಂಜುಂಡೇಶ್ವರ(32),  ಪಾರ್ವತಿ ದಂಪತಿ ಹಾಗೂ ಅವರ ಪುಟ್ಟ ಮಕ್ಕಳಾದ ಗೌತಮಿ(3), ಸ್ವರೂಪ್(2) ಆತ್ಮಹತ್ಯೆಗೆ ಶರಣಾಗಿರುವವರಾಗಿದ್ದಾರೆ.  ನಂಜುಂಡ ಅವರು  ಇಲ್ಲಿನ ಕಂಪೆನಿಯೊಂದರ ನೌಕರರಾಗಿದ್ದಾರೆ ಎಂದು ತಿಳಿದು ಬಂದಿದೆ.

ಆತ್ಮಹತ್ಯೆಗೆ ನಿಖರ ಕಾರಣಗಳೇನು ಎನ್ನುವುದು ಇನ್ನೂ ತಿಳಿದು ಬಂದಿದೆ. ಮಕ್ಕಳಿಬ್ಬರಿಗೆ  ವಿಷವುಣಿಸಿ ದಂಪತಿಗಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ನಮ್ಮ ಸಾವಿಗೆ ನಾವೇ ಕಾರಣರಾಗಿದ್ದು, ಯಾರೂ ಜವಾಬ್ದಾರರಲ್ಲ ಎಂದು ಬರೆದಿದ್ದಾರೆ.

ನಮ್ಮಿಂದ ಯಾರಿಗಾದರೂ ನೋವಾಗಿದ್ದರೆ, ನಮ್ಮಿಂದೇನಾದರೂ ತಪ್ಪಾಗಿದ್ದರೆ ನಮ್ಮನ್ನು ಕ್ಷಮಿಸಿ ಎಂದು ದಂಪತಿ ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಗಾದಿಗನೂರು ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿ