ಕೊರೊನಾ 2ನೇ ಅಲೆಯಲ್ಲಿ ಎಷ್ಟು ಮಕ್ಕಳು ಸೋಂಕಿಗೆ ಗುರಿಯಾಗಿದ್ದಾರೆ ಗೊತ್ತಾ?
ನವದೆಹಲಿ: ಕೊರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚಿನ ಹಾನಿ ಉಂಟು ಮಾಡುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ ಈ ನಡುವೆ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ 39 ಸಾವಿರದ 846 ಮಕ್ಕಳು ಕೊರೊನಾ ಸೋಂಕಿತರಾಗಿರುವುದು ಬೆಳಕಿಗೆ ಬಂದಿದೆ.
ಮಾರ್ಚ್ 18ರಿಂದ ಅಂಕಿ ಅಂಶಗಳನ್ನ ಗಮನಿಸಿದಾಗ ಇದು ಬೆಳಕಿಗೆ ಬಂದಿದೆ. ಈ ಸೋಂಕಿತ 39 ಸಾವಿರ ಮಕ್ಕಳು 9 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎನ್ನುವುದು ಇನ್ನೂ ಆತಂಕಕಾರಿ ವಿಚಾರವಾಗಿದೆ. 39 ಸಾವಿರ ಮಕ್ಕಳಲ್ಲಿ 15 ಮಕ್ಕಳು ಸಾವನ್ನಪ್ಪಿದ್ದಾರೆ.
ಚಿಕ್ಕಚಿಕ್ಕ ಮಕ್ಕಳಷ್ಟೇ ಅಲ್ಲದೇ 10ರಿಂದ 19 ವರ್ಷದೊಳಗಿನವರಲ್ಲಿ ಕೊರೊನಾ ಹೆಚ್ಚಾಗಿ ಕಂಡು ಬಂದಿದೆ. ಈ ಸೋಂಕಿತರ ಪೈಕಿ 16 ಮಂದಿ ಸಾವನ್ನಪ್ಪಿದ್ದಾರೆ. ಚಿಕ್ಕ ಮಕ್ಕಳಿಗಿಂದ 19 ವರ್ಷದೊಳಗಿ ವಯಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿಗೊಳಗಾಗುತ್ತಿದ್ದಾರೆ.
10ರಿಂದ 19 ವರ್ಷ ವಯಸ್ಸಿನವರು ಮನೆಯಿಂದ ಆಚೆಗೆ ಹೋಗುತ್ತಿವುದು ಹೆಚ್ಚಾಗಿರುವುದರಿಂದಾಗಿ ಇವರಲ್ಲಿ ಹೆಚ್ಚು ಕೊರೊನಾ ಸೋಂಕು ಪತ್ತೆಯಾಗುತ್ತಿದೆ ಎಂದು ತಜ್ಷರು ಹೇಳುತ್ತಿದ್ದಾರೆ. ಕೊರೊನಾ ಮೂರನೇ ಅಲೆಯ ಸಂದರ್ಭದಲ್ಲಿ ಮಕ್ಕಳೇ ಟಾರ್ಗೆಟ್ ಎಂದು ಹೇಳುತ್ತಿರುವ ನಡುವೆಯೇ ಕೊರೊನಾ ಎರಡನೇ ಅಲೆಯಲ್ಲಿ ಕೂಡ 39 ಸಾವಿರಕ್ಕೂ ಅಧಿಕ ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದು ಪರೀಕ್ಷೆ ಮಾಡಿಸಿಕೊಂಡವರಲ್ಲಿ ಪತ್ತೆಯಾಗಿರುವುದಾಗಿದೆ. ಇನ್ನೂ ಪರೀಕ್ಷೆಯೇ ಮಾಡಿಸಿಕೊಳ್ಳದವರ ಸಂಖ್ಯೆ ಎಷ್ಟಿರಬಹುದು ಎನ್ನುವುದು ತಿಳಿದಿಲ್ಲ.
ಕೊರೊನಾ ಒಂದನೇ ಅಲೆ ಸಂದರ್ಭದಲ್ಲಿ ಸರ್ಕಾರಗಳು ಎಚ್ಚೆತ್ತುಕೊಳ್ಳಲಿಲ್ಲ. ಎರಡನೇ ಅಲೆ ಬಂದಾಗಲೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಎಚ್ಚೆತ್ತುಕೊಂಡಿಲ್ಲ. ಇದರ ನಡುವೆಯೇ ಮೂರನೇ ಅಲೆ ಸಮೀಪಿಸುತ್ತಿದೆ. ಈಗಲಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತವೋ ತಿಳಿದು ಬಂದಿಲ್ಲ. ಸರ್ಕಾರ ಕೇವಲ ಲಾಕ್ ಡೌನ್ ಮಾಡುವುದಷ್ಟೇ ತನ್ನ ಕರ್ತವ್ಯ ಎಂದು ತಿಳಿದುಕೊಂಡಿರುವಂತಿದೆ ಎಂಧು ವ್ಯಾಪಕ ಆಕ್ರೋಶಗಳು ಹೇಳಿ ಬಂದಿದೆ.