ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ನ ಶಶಾಂಕ್ ಏಕಬೋಟೆ ಕೊವಿಡ್ ಗೆ ಬಲಿ
18/05/2021
ಹುಬ್ಬಳ್ಳಿ: ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ನ ಹುಬ್ಬಳ್ಳಿ ಶಾಖೆಯನ್ನು ನಿರ್ವಹಿಸುತ್ತಿದ್ದ ಮೋಹನ ಏಕಬೋಟೆಯವರ ಪುತ್ರ ಶಶಾಂಕ್ ಏಕಬೋಟೆ ಮಹಾಮಾರಿ ಕೊವಿಡ್ 19ಗೆ ಬಲಿಯಾಗಿದ್ದಾರೆ.
37 ವರ್ಷದ ಶಶಾಂಕ್ ಮೋಹನ ಏಕಬೋಟೆ ಅವರು, ಕೊವಿಡ್ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕೂ ಮೊದಲು ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಸಿರಾಟದ ಸಮಸ್ಯೆ ತೀವ್ರವಾಗುತ್ತಿದ್ದಂತೆಯೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯರ ಸತತ ಪ್ರಯತ್ನಗಳ ಬಳಿಕವೂ ಅವರು ಚೇತರಿಸಿಕೊಳ್ಳಲಿಲ್ಲ. ಇಂದು ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಶಶಾಂಕ್ ಅವರು ಮಾಜಿ ಮಹಾಪೌರರು ಕೂಡ ಆಗಿದ್ದರು. ಸಾಮಾಜಿಕ ಕಾರ್ಯಗಳಲ್ಲಿಯೂ ಗುರುತಿಸಿಕೊಂಡಿದ್ದರು.