ಮಲಯಾಳಂ ಖ್ಯಾತನಟ ಮಮ್ಮುಟ್ಟಿ ಸಹಿತ 300 ಮಂದಿಯ ವಿರುದ್ಧ ಪ್ರಕರಣ ದಾಖಲು! - Mahanayaka
7:22 AM Saturday 10 - January 2026

ಮಲಯಾಳಂ ಖ್ಯಾತನಟ ಮಮ್ಮುಟ್ಟಿ ಸಹಿತ 300 ಮಂದಿಯ ವಿರುದ್ಧ ಪ್ರಕರಣ ದಾಖಲು!

mammootty
08/08/2021

ಕೋಯಿಕ್ಕೋಡ್: ವೈದ್ಯಕೀಯ ಸೌಲಭ್ಯದ ಉದ್ಘಾಟನೆ ಸಂದರ್ಭದಲ್ಲಿ ಕೋವಿಡ್-19 ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಮಲಯಾಳಂ, ತಮಿಳಿನ ಖ್ಯಾತನಟ ಮಮ್ಮುಟ್ಟಿ ಹಾಗೂ ರಮೇಶ್ ಪಿಶಾರೋಡಿ ಮತ್ತು ಇತರ 300 ಜನರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಟ ಮಮ್ಮುಟ್ಟಿ ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ ಸುಮಾರು 300 ಜನರು ಭಾಗವಹಿಸಿದ್ದರು. ಈ ವೇಳೆ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಆಗಸ್ಟ್ 3ರಂದು ಈ ಘಟನೆ ನಡೆದಿದ್ದು, ನಾವು ಕೇರಳದ ಸಾಂಕ್ರಾಮಿಕ ರೋಗಗಳ ಕಾಯಿದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಆಸ್ಪತ್ರೆಯ ಎಂಡಿ, ಸಿಒಒ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

ನೀವು ಬೆಳೆದ ಬೆಳೆಗಳನ್ನು ಕೊಟ್ಟು, ಐಶಾರಾಮಿ ಕಾರು ಕೊಂಡುಹೋಗಿ: ಟೊಯೋಟಾದಿಂದ ರೈತರಿಗೆ ಆಫರ್

ಮತ್ತು ಬರುವ ಔಷಧಿ ನೀಡಿ ಮಹಿಳಾ ಪೊಲೀಸ್ ಮೇಲೆ ಸಬ್ ಇನ್ಟ್ ಪೆಕ್ಟರ್ ನಿಂದ ಅತ್ಯಾಚಾರ

ಪಿಕ್ನಿಕ್ ಗೆ ಹೋಗಿದ್ದ ಒಂದೇ ಕುಟುಂಬದ ನಾಲ್ವರು ಕುಟುಂಬಸ್ಥರ ಕಣ್ಣ ಮುಂದೆಯೇ ನೀರುಪಾಲಾದರು!

ಇಂದಿರಾ ಇಲ್ಲದಿರುತ್ತಿದ್ದರೆ, ಸಿ.ಟಿ.ರವಿ ಹರಿದ ಚಡ್ಡಿ ಹಾಕಿಕೊಂಡು ಯಾರದ್ದೋ ಮನೆಯ ಸೆಗಣಿ ಬಾಚುತ್ತಿರುತ್ತಿದ್ದರು | ಕಾಂಗ್ರೆಸ್

ನೋಡ ನೋಡುತ್ತಿದ್ದಂತೆಯೇ ಉರುಳಿ ಬಿದ್ದ ಮೂರು ಅಂತಸ್ತಿನ ಹೊಟೇಲ್ ಕಟ್ಟಡ!

ಇತ್ತೀಚಿನ ಸುದ್ದಿ