ಮಲಯಾಳಂ ಶಿಕ್ಷಕರು ನಮಗೆ ಬೇಡ, ಕನ್ನಡ ಶಿಕ್ಷಕರನ್ನು ಕೊಡಿ: ವಿದ್ಯಾರ್ಥಿಗಳಿಂದ ಪಟ್ಟು
ಮಂಜೇಶ್ವರ: ಸರ್ಕಾರಿ ಶಾಲೆಗೆ ಮಲಯಾಳಂ ಶಿಕ್ಷಕರ ನೇಮಕದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಮಂಜೇಶ್ವರದ ಅಂಗಡಿಮೊಗರು ಎಂಬಲ್ಲಿ ನಡೆದಿದೆ.
ಶಾಲಾ ವಿದ್ಯಾರ್ಥಿಗಳು ಸೇರಿದಂತೆ ರಕ್ಷಕ ,ಶಿಕ್ಷಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಈ ಹಿಂದೆ ಶಿಕ್ಷಕರ ನೇಮಕಾತಿಯನ್ನು ತಾತ್ಕಾಲಿಕ ಅಗಿ ತಡೆಹಿಡಿಯಲಾಗಿತ್ತು. ಇದೀಗ ಮತ್ತೆ ತಿರುವನಂತಪುರಂನ ಶಿಕ್ಷಕರ ನೇಮಕಾತಿ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ನಮಗೆ ಮಲಯಾಳಂ ಶಿಕ್ಷಕರು ಬೇಡ, ಕನ್ನಡ ಶಿಕ್ಷಕರನ್ನು ಕೊಡಿ ಎಂದು ವಿದ್ಯಾರ್ಥಿಗಳು ಬೇಡಿಕೆಯಿಟ್ಟಿದ್ದು, ಕಾಸರಗೋಡು ಕನ್ನಡದ ಮಣ್ಣು, ನಮಗೆ ಕನ್ನಡ ಶಿಕ್ಷಕರನ್ನೇ ನೀಡಿ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka