ಅರ್ಚಕರ ವಶದಲ್ಲಿದ್ದ ಮಲೆ ಮಹದೇಶ್ವರನ ಚಿನ್ನದ ಕರಡಿಗೆ ನಾಪತ್ತೆ! | ಅರ್ಚಕರ ಕಚ್ಚಾಟವೇ ಕಾರಣ?

male mahadeshwara
25/03/2021

ಚಾಮರಾಜನಗರ: ಮಲೆ ಮಹದೇಶ್ವರ ಉತ್ಸವ ಮೂರ್ತಿಯ ಮೇಲಿದ್ದ ಚಿನ್ನದ ಕರಡಿಗೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ಅರ್ಚಕರ ವಶದಲ್ಲಿದ್ದ ಲಕ್ಷಾಂತರ ಮೌಲ್ಯದ ಬಂಗಾರದ ಒಡವೆಗಳು ಇದೀಗ ನಾಪತ್ತೆಯಾಗಿದೆ ಎಂದು ಹೇಳಲಾಗಿದೆ.

ಕರಡಿಗೆ ನಾಪತ್ತೆ ಬೆಳಕಿಗೆ ಬಂದಿದ್ದರೂ, ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಹೇಳಲಾಗಿದೆ.  ಚಿನ್ನದ ಕರಡಿಗೆ ನಾಪತ್ತೆಯಾಗಿ ಐದು ದಿನಗಳಾದರೂ ಈ ಬಗ್ಗೆ ಯಾವುದೇ ದೂರು ಕೂಡ ದಾಖಲಾಗಿಲ್ಲ.  ಅರ್ಚಕರ ಮೂರು ಗುಂಪುಗಳ ನಡುವೆ ಮುಸುಕಿನ ಗುದ್ದಾಟವಿದ್ದು, ಅರ್ಚಕರ ನಡುವಿನ ವೈಮನಸ್ಸು ಕರಡಿಗೆ ನಾಪತ್ತೆ ಹಿಂದಿದೆ ಎಂದು ಹೇಳಲಾಗಿದೆ.

ಅರ್ಚಕರ ಒಂದು ಗುಂಪಿಗೆ ಇನ್ನೊಂದು ಗುಂಪು ಕೆಟ್ಟ ಹೆಸರು ತರಲು ಈ ಕೃತ್ಯ ನಡೆಸಿದೆ ಎಂದು ಹೇಳಲಾಗುತ್ತಿದೆ.  ಚಿನ್ನದ ಕರಡಿಗೆಗಾಗಿ ಸದ್ದಿಲ್ಲದೇ ಹುಡುಕಾಟ ನಡೆಯುತ್ತಿದೆ. ಹುಂಡಿ ಎಣಿಕೆಯ ವೇಳೆ ಚಿನ್ನದ ಕರಡಿಗೆ ಸಿಕ್ಕಿದರೆ ಈ ಪ್ರಕರಣ ಮುಚ್ಚಿ ಹಾಕುವ ತಂತ್ರ ನಡೆಸಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:

ಮೊಬೈಲ್ ಕದ್ದು ಮೊಬೈಲ್ ಮಾಲಕನ ಬಳಿಯೇ ಪಾಸ್ ವರ್ಡ್ ಕೇಳಿದ ಕಳ್ಳ!

ಇತ್ತೀಚಿನ ಸುದ್ದಿ

Exit mobile version