ಮಳೆಗಾಗಿ 6 ವರ್ಷ ವಯಸ್ಸಿನ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಗ್ರಾಮದ ಹಿರಿಯರು! - Mahanayaka
4:59 PM Wednesday 11 - December 2024

ಮಳೆಗಾಗಿ 6 ವರ್ಷ ವಯಸ್ಸಿನ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಗ್ರಾಮದ ಹಿರಿಯರು!

bhopal
07/09/2021

ಭೋಪಾಲ್:  ಮಳೆಗಾಗಿ ಆರು ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಬುಂದೇಲಖಂಡದ ದಾಮೋಹ್ ಜಿಲ್ಲೆಯಲ್ಲಿ ನಡೆದಿದ್ದು, ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.

ದಾಮೋಹ್ ಜಿಲ್ಲೆಯ ಜುಬೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಬನಿಯಾ ಎಂಬಲ್ಲಿ ಸಾರ್ವಜನಿಕವಾಗಿ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಲಾಗಿದ್ದು, ಮಳೆ ಬರಿಸಲು ಮೂಢನಂಬಿಕೆಯ ಆಚರಣೆಯನ್ನು ನಡೆಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿಆರ್ ತನ್ವೀರ್ ತಿಳಿಸಿದ್ದಾರೆ.

ಗ್ರಾಮದ ಹಿರಿಯರು, ಬಾಲಕಿಯರನ್ನು ಬೆತ್ತಲೆಯಾಗಿಸಿ ಅವರಿಗೆ ನೊಗ ಹೊರಿಸಿ, ಕೊರಳಿಗೆ ಕಪ್ಪೆಯನ್ನು ಕಟ್ಟಿಸಿ ಮೆರವಣಿಗೆ ಮಾಡಲಾಗಿದೆ. ಮಳೆಗಾಗಿ ವರುಣ ದೇವರ ಪ್ರಾರ್ಥನೆ ಮಾಡಲು ಈ ರೀತಿಯ ಕೆಲಸ ಮಾಡಲಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.

ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (NCPCR) ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಸಮಗ್ರ ವರದಿ ನೀಡುವಂತೆ ದಾಮೋಹ್ ಜಿಲ್ಲಾಡಳಿತಕ್ಕೆ ತಾಕೀತು ಮಾಡಿದೆ ಎಂದು ತಿಳಿದು ಬಂದಿದೆ.

ಇನ್ನೂ ಈ ಘಟನೆ ವಿರುದ್ಧ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿದೆ. ಯಾವುದೇ ದೇವರು ತನ್ನ ಮಕ್ಕಳ ಬೆತ್ತಲೆ ದೇಹವನ್ನು ನೋಡಲು ಆಸೆ ಪಡುತ್ತಾನೆಯೇ? ಇಂತಹದ್ದೆಲ್ಲ ಆಚರಣೆಗಳನ್ನು ಹಿರಿಯರು ಅನ್ನಿಸಿಕೊಂಡವರೇ ಮಾಡುತ್ತಿದ್ದಾರೆ. ಇದು ನಮ್ಮ ದುರಂತ ಎಂದು ಆಕ್ರೋಶ ವ್ಯಕ್ತವಾಗಿದೆ.

ಇನ್ನಷ್ಟು ಸುದ್ದಿಗಳು…

ಮಳೆಗಾಗಿ 6 ವರ್ಷ ವಯಸ್ಸಿನ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಗ್ರಾಮದ ಹಿರಿಯರು!

“ಬ್ರಾಹ್ಮಣರನ್ನು ನಮ್ಮ ಗ್ರಾಮಗಳಿಗೆ ಬರಲು ಬಿಡಬಾರದು” ಎಂದಿದ್ದ ಛತ್ತೀಸ್ ಗಢ ಸಿಎಂ ತಂದೆ ನಂದ ಕುಮಾರ್ ಬಘೇಲ್ ಜೈಲು ಪಾಲು!

ಕೃಷಿ ಇಲಾಖೆಯಲ್ಲಿ 210 ಕೋಟಿ ರೂ. ಭ್ರಷ್ಟಾಚಾರ: ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಗೆ ದೂರು

ಪಂಜ್ ಶಿರ್ ಗಳನ್ನು ತಾಲಿಬಾನ್ ವಶಕ್ಕೆ ಪಡೆದಿರುವುದು ಸುಳ್ಳು | ಸ್ಪಷ್ಟಪಡಿಸಿದ NRF

ನಿಫಾ ವೈರಸ್ ನ ರೋಗ ಲಕ್ಷಣಗಳೇನು ಗೊತ್ತಾ? | ರೋಗಿ ಕೋಮಾಕ್ಕೆ ಹೋಗುವ ಸಾಧ್ಯತೆ ಹೆಚ್ಚು!

ಸ್ನಾನಕ್ಕೆ ಹೋಗಿ 2 ಗಂಟೆಯಾದರೂ ವಿದ್ಯಾರ್ಥಿನಿ ಮರಳಿ ಬರಲಿಲ್ಲ | ಬಾತ್ ರೂಮ್ ಬಾಗಿಲು ಮುರಿದು ನೋಡಿದಾಗ ಕಾದಿತ್ತು ಶಾಕ್

8 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟುಕೊಂದ ತಾಲಿಬಾನಿಗರು!

ಇತ್ತೀಚಿನ ಸುದ್ದಿ