ಮಲೆನಾಡು: ತುಂಬಿ ಹರಿಯುತ್ತಿರುವ ಕಿರುಸೇತುವೆಯಲ್ಲಿ ವೃದ್ಧೆಯನ್ನು ಹೊತ್ತು ಸಾಗಿದ ಹಳ್ಳಿಗರು
20/10/2024
ಚಿಕ್ಕಮಗಳೂರು: ಕಾಫಿನಾಡ ಮಹಾಮಳೆಗೆ ಮಲೆನಾಡು ಭಾಗ ಕಂಗಾಲಾಗಿದ್ದಾರೆ. ಭಾರೀ ಮಳೆಗೆ ಗ್ರಾಮೀಣ ಭಾಗದ ಸೇತುವೆಗಳು ಜಲಾವೃತವಾಗಿದೆ.
ಮುತ್ತೋಡಿ ವ್ಯಾಪ್ತಿಯ ಗ್ರಾಮದ ಜನರು ಹಳ್ಳ ದಾಟಲು ಪರದಾಡಿದ್ದಾರೆ. ಕಿರು ಸೇತುವೆ ಮೇಲೆ ನೀರು ತುಂಬಿ ಹರಿದ ಪರಿಣಾಮ ವೃದ್ಧೆಯನ್ನ ಅಂಗೈಲಿ ಹೊತ್ತು ಹಳ್ಳಿಗರು ಸೇತುವೆ ದಾಟಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಲಗಾರು ಗ್ರಾಮ ಮುತ್ತೋಡಿ ಅರಣ್ಯ ವ್ಯಾಪ್ತಿಯ ಕುಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದ ಭಾರೀ ಪ್ರಮಾಣದ ನೀರು ಹರಿದಿದೆ.
ಕಿರು ಸೇತುವೆ ತುಂಬಿದರಿಂದಾಘಿ ಮಲಗಾರು ಗ್ರಾಮದ ಜನರ ಪರದಾಡಿದ್ದಾರೆ. ಮಲ್ಲಂದೂರು ಸಮೀಪದ ಮಲಗಾರು ಗ್ರಾಮದಲ್ಲಿ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: