ಪ್ರವಾಸಿಗರೇ ಗಮನಿಸಿ, ಮಲ್ಪೆ ಬೀಚ್ ಗೆ ಇಳಿದರೆ 500 ರೂಪಾಯಿ ದಂಡ
ಉಡುಪಿ: ಇತ್ತೀಚೆಗೆ ಕೊಡಗಿನ ಯುವತಿ ಯೋರ್ವಳು ಸಮುದ್ರದ ಸೆಳೆತಕ್ಕೆ ಸಿಕ್ಕಿ ಮೃತಪಟ್ಟ ಬೆನ್ನಲ್ಲೇ ಇದೀಗ ಪ್ರವಾಸಿಗರು ಮಲ್ಪೆ ಬೀಚ್ ನಲ್ಲಿ ನೀರಿಗೆ ಇಳಿಯುವುದನ್ನು ನಿರ್ಬಂಧಿಸಲಾಗಿದೆ.
ಬೀಚ್ ನ ಸುಮಾರು 1 ಕಿ.ಮೀ. ತೀರದಲ್ಲಿ 5ರಿಂದ 6 ಅಡಿ ಎತ್ತರದಲ್ಲಿ ಎತ್ತರ ನೆಟ್ ಗಳನ್ನು ಹಾಕಲಾಗಿದ್ದು, ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯ ನಾಮಫಲಕ ಹಾಕಲಾಗಿದ್ದು, ನಿಯಮ ಉಲ್ಲಂಘಿಸಿ ಸಮುದ್ರಕ್ಕಿಳಿದರೆ 500 ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಮಳೆಗಾಲದಲ್ಲಿ ಸಮುದ್ರದ ನೀರಿಗೆ ಇಳಿಯುವುದರಿಂದ ಅಪಾಯಗಳು ಹೆಚ್ಚಿರುತ್ತದೆ. ಪ್ರವಾಸಿಕರಿಗೆ ಕಡಲಿನ ಸೆಳೆತದ ಅರಿವು ಕೂಡ ಇರುವುದಿಲ್ಲ. ಹೀಗಾಗಿ ಪ್ರವಾಸಿಗರ ಹಿತದೃಷ್ಟಿಯಿಂದ ಈ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಬೀಚ್ ನ ನಿರ್ವಹಣಾ ಸಮಿತಿ ಹಾಗು ಮಂತ್ರ ಟೂರಿಸಂ ಡೆವಲಪ್ ಮೆಂಟ್ ಸಂಸ್ಥೆಯ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಸದ್ಯ ಪ್ರವಾಸಿಗಳು ನೆಟ್ ನ ಹೊರಗಿನಿಂದಲೇ ಸಮುದ್ರವನ್ನು ವೀಕ್ಷಿಸಬಹುದಾಗಿದೆ. ಇನ್ನೂ ಆಗಸ್ಟ್ ಕೊನೆಗೆ ಅಥವಾ ಸೆಪ್ಟಂಬರ್ ನಲ್ಲಿ ಪರಿಸ್ಥಿತಿಗಳನ್ನು ನೋಡಿಕೊಂಡು ಬೀಚ್ ಗೆ ಇಳಿಯಲು ಅವಕಾಶ ನೀಡಲಾಗುವುದು ಎಂದು ಇಲ್ಲಿನ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಳು…
“ಬಡ ಮಕ್ಕಳ ಮೊಟ್ಟೆ ತಿಂದ ಜೊಲ್ಲೆಗೆ ಝೀರೋ ಟ್ರಾಫಿಕ್ ರಾಜಮರ್ಯಾದೆ!”
ಅಪ್ರಾಪ್ತೆಯರನ್ನು ಗರ್ಭಿಣಿಯಾಗಿಸಿ ಪರಾರಿಯಾಗುತ್ತಿದ್ದಾತನನ್ನು ಉಪಾಯವಾಗಿ ಬಂಧಿಸಿದ ಮಹಿಳಾ ಎಸ್ ಐ!
ತನ್ನ ವಿರುದ್ಧದ ವರದಿ ಪ್ರಕಟಿಸದಂತೆ ನ್ಯೂಸ್ ಫಸ್ಟ್ ಗೆ ತಡೆಯಾಜ್ಞೆ ತಂದ ಸಚಿವೆ ಜೊಲ್ಲೆ
ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ | ಆರೋಪಿ ಅರೆಸ್ಟ್
ಸ್ಮಶಾನದ ಅರ್ಚಕ ಸೇರಿದಂತೆ ಮೂವರಿಂದ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ | ದೇಶಾದ್ಯಂತ ಆಕ್ರೋಶ
ಲಾಬಿ ಮಾಡುತ್ತಿದ್ದರೆ ನಾನೂ ಮಂತ್ರಿಯಾಗುತ್ತಿದ್ದೆ | ಗದ್ಗದಿತರಾದ ಶಾಸಕ ರೇಣುಕಾಚಾರ್ಯ