ಮಾಮಲೇ ದೇಸಾಯಿ ಶಾಲೆಯಿಂದ ಶಿಗ್ಗಾವಿಯಲ್ಲಿ ದೊಡ್ಡ ಪ್ರಮಾಣದ ವಿದ್ಯಾವಂತರು: ಸಿಎಂ ಬೊಮ್ಮಾಯಿ
ಹಾವೇರಿ: ಶಿಗ್ಗಾವಿಯಲ್ಲಿ ಬಹಳ ದೊಡ್ಡ ಪ್ರಮಾಣದ ವಿದ್ಯೆ ಪಡೆದವರ ಸಂಖ್ಯೆ ಇದ್ದರೆ ಅದಕ್ಕೆ ಮಾಮಲೇ ದೇಸಾಯಿ ಶಾಲೆ ಪಾತ್ರ ಬಹಳ ದೊಡ್ಡದಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಶಿಗ್ಗಾಂವಿಯಲ್ಲಿ ಶ್ರೀಮಂತ ಬಸವಂತ ಬುಳ್ಳಪ್ಪ ಮಾಮ್ಲೆ ದೇಸಾಯಿ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ಅಮೃತ ಮಹೋತ್ಸವ ಹಾಗೂ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸಂಸ್ಥೆ ಅಮೃತ ಮಹೋತ್ಸವ ಮುಟ್ಟಲು ಹಲವು ಸವಾಲು ಎದುರಿಸಿ ಬೆಳೆದು ನಿಂತಿರೋದು ಸ್ಪಷ್ಟ. ಸ್ವಾತಂತ್ರ್ಯ ಪೂರ್ವದಲ್ಲಿ ಗಜಾನನ ದೇವಸ್ಥಾನ, ವಿರಕ್ತ ಮಠಕ್ಕೆ ಹೋಯಿತು. ಬಳಿಕ ಸಂಸ್ಥೆ ಪ್ರಾರಂಭ ಮಾಡುವ ದಿನಗಳಲ್ಲಿ ಶಿಕ್ಷಣಕ್ಕೆ ಇಷ್ಟು ಮಹತ್ವ ಇರಲಿಲ್ಲ. ಆಗ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಇದ್ದರು. ಅಂದು ಹುರುಳಿಕುಪ್ಪಿಯವರು, ಮಾಮಲೇ ದೇಸಾಯಿ, ಶಂಕರಗೌಡ ಪಾಟೀಲ್ ರು ಹಲವಾರು ಮಹನೀಯರು ಕಷ್ಟದಲ್ಲಿ ಈ ಸಂಸ್ಥೆ ಪ್ರಾರಂಭಿಸಿದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.
ಸಾಧನೆ:
.ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಹಲವು ಸಾಧನೆ ಮಾಡಿದ್ದಾರೆ. ಸಂಸ್ಥಾಪಕರಿಗೆ, ವಿದ್ಯಾರ್ಥಿಗಳಿಗೆ, ಗುರುಗಳಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw