ಮಮತಾ ಬ್ಯಾನರ್ಜಿ ಮೇಲೆ ಗೂಂಡಾಗಳಿಂದ ದಾಳಿ | ಕಾಲಿಗೆ ಗಂಭೀರ ಏಟು
ನಂದಿಗ್ರಾಮ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಾಮಪತ್ರ ಸಲ್ಲಿಸಲು ತೆರಳಿದ್ದ ವೇಳೆ ಅವರ ಮೇಲೆ ಕೆಲವರು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಸುತ್ತಮುತ್ತ ಪೊಲೀಸ್ ಭದ್ರತೆ ಇಲ್ಲದಿರುವುದನ್ನು ಗಮನಿಸಿ, ನಾಲ್ಕರಿಂದ 5 ಜನ ದುಷ್ಕರ್ಮಿಗಳು ಏಕಏಕಿ ಅವರ ಮೇಲೆ ದಾಳಿ ನಡೆಸಿದ್ದಾರೆ.
ಹಲ್ಲೆಯಿಂದಾಗಿ ಮಮತಾ ಬ್ಯಾನರ್ಜಿ ಅವರ ಕಾಲಿಗೆ ತೀವ್ರ ತರಹದ ಏಟು ತಗಲಿದೆ. ಈ ಘಟನೆಯ ಬಗ್ಗೆ ಭಾರತೀಯ ಚುನಾವಣಾ ಆಯೋಗ ವರದಿ ಕೂಡ ಕೇಳಿದೆ. ನಾಮಪತ್ರ ಸಲ್ಲಿಸಿ ನಾನು ಮರಳಿ ಕಾರಿಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ನಾಲ್ಕರಿಂದ ಐದು ಜನ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಲ್ಲೆಯಿಂದ ನನ್ನ ಕಾಲಿನ ಭಾಗ ಊದಿಕೊಂಡಿದೆ. ಖಂಡಿತ ಇದು ಯೋಜಿತ ದಾಳಿಯಾಗಿದ್ದು, ಪೊಲೀಸರು ಇಲ್ಲದಿದ್ದಾಗ ನನ್ನ ಮೇಲೆ ದಾಳಿ ನಡೆಸಲು ಪಿತೂರಿ ಮಾಡಿದ್ದಾರೆ ಎಂದು ಈ ಘಟನೆ ಸಂಬಂಧ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.
ಇಂದು ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಮತಾ ಬ್ಯಾನರ್ಜಿ ರಾತ್ರಿ ಅಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದ್ದರು. ಆದರೆ, ಅಚಾನಕ್ಕಾಗಿ ನಡೆದ ಈ ಘಟನೆಯಿಂದಾಗಿ ಅವರನ್ನು ಇದೀಗ 130 ಕಿ.ಮೀ ದೂರದ ಕೋಲ್ಕತ್ತಾಗೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಕರೆದುಕೊಂಡು ಹೋಗಲಾಗಿದೆ.