ಗೋಹತ್ಯಾ ಪ್ರಕರಣದಲ್ಲಿ ಮುಸ್ಲಿಂ ಮಾಂಸ ವ್ಯಾಪಾರಿಯನ್ನು ಸಿಲುಕಿಸುವ ಸಂಚು ನಡೆಸಿದ್ದ ವ್ಯಕ್ತಿಯ ಬಂಧನ

13/03/2025

ಗೋಹತ್ಯಾ ಪ್ರಕರಣದಲ್ಲಿ ಮುಸ್ಲಿಂ ಮಾಂಸ ವ್ಯಾಪಾರಿಯನ್ನು ಸಿಲುಕಿಸುವ ಸಂಚು ನಡೆಸಿದ್ದ ವಿಶ್ ಸಿಂಗ್ ಕಾಂಬೋಜ್ ಎಂಬ ವ್ಯಕ್ತಿಯನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ವಿಶ್ವಹಿಂದು ಪರಿವಾರ್ ಎಂಬ ಸಂಘಟನೆಯ ಸ್ಥಾಪಕನಾಗಿರುವ ಈತ ಗೋರಕ್ಷಕನಾಗಿಯೂ ಗುರುತಿಸಿಕೊಂಡಿದ್ದಾನೆ. ಕುರೇಶಿ ಎಂಬ ವ್ಯಕ್ತಿಯು ತನ್ನ ಮಾಂಸ ವ್ಯಾಪಾರದ ಪಾಲುದಾರನಾದ ಮುಸ್ಲಿಂ ವ್ಯಕ್ತಿಯನ್ನು ಗೋ ಹತ್ಯೆಯ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶವನ್ನು ಹೊಂದಿದ್ದ. ಅದಕ್ಕಾಗಿ ಈ ಕಾಂಬೋಜಿಗೆ 50,000 ಯನ್ನು ಕೊಟ್ಟು ಸುಳ್ಳು ಗೋಹತ್ಯೆ ಪ್ರಕರಣವನ್ನು ಆತನ ವಿರುದ್ಧ ದಾಖಲಿಸುವಂತೆ ಕೋರಿದ್ದ.

ಗೋ ಹತ್ಯೆ ನಡೆಸಿದವರನ್ನು ಬಂಧಿಸಿ ಎಂದು ಈ ಕಾಂಬೋಜ್ ಮತ್ತು ಆತನಿಗೆ ಹಣ ನೀಡಿದ ಕುರೇಶಿ ಪ್ರಮುಖ ರಸ್ತೆಯ ಬದಿಯಲ್ಲಿ ಪ್ರಾಣಿಗಳ ಅವಶೇಷವನ್ನು ಇಟ್ಟು ಪ್ರತಿಭಟಿಸಿದ್ದರು. ಆದರೆ ಈ ಅವಶೇಷಗಳಿಗೆ ಹಲವು ದಿನಗಳಾದಂತೆ ಕಂಡು ಬಂದಿರುವುದರಿಂದ ಪೊಲೀಸರಿಗೆ ಅನುಮಾನ ಉಂಟಾಯಿತು. ಅವರಿಬ್ಬರೂ ವೈರುಧ್ಯದ ಹೇಳಿಕೆಗಳನ್ನು ನೀಡುವುದರೊಂದಿಗೆ ಪೊಲೀಸರಿಗೆ ಇದರ ಹಿಂದೆ ಸಂಚು ಅಡಗಿದೆ ಅನ್ನೋದು ಖಚಿತವಾಯಿತು. ಕಾಂಬೋಜಿಯನ್ನು ಅವರು ಬಂಧಿಸಿದರು. ಕುರೇಶಿಯ ನಿರ್ದೇಶನದಂತೆ ಪ್ರಾಣಿಯ ಅವಶೇಷವನ್ನು ರಸ್ತೆಯ ಬದಿಯಲ್ಲಿಟ್ಟು ತಾನು ಪ್ರತಿಭಟನೆ ನಡೆಸಿರುವುದಾಗಿ ಆತ ಒಪ್ಪಿಕೊಂಡ.

ಮಾಂಸ ವ್ಯಾಪಾರ ಮಾಡುತ್ತಿದ್ದ ಖುರೇಶಿ ಮತ್ತು ಆತನ ಪಾಲುದಾರ ಇತ್ತೀಚಿಗೆ ಬೇರೆಬೇರೆಯಾಗಿದ್ದರು. ಮಾತ್ರ ಅಲ್ಲ ಕುರೇಶಿಗೆ ಹೆಚ್ಚು ವ್ಯಾಪಾರ ಆಗ್ತಾ ಇರಲಿಲ್ಲ. ಆದರೆ ಆತನನ್ನು ಸಿಲುಕಿಸಿ ಆತನ ವ್ಯಾಪಾರವನ್ನು ನಾಶ ಮಾಡುವುದೇ ಕುರೇಶಿಯ ಉದ್ದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಖುರೇಶಿ ತಪ್ಪಿಸಿಕೊಂಡಿದ್ದಾನೆ. ಮಾತ್ರ ಅಲ್ಲ ಕಾಂಬೋಜಿಯ ಮೇಲೆ ಈಗಾಗಲೇ ಏಳು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version