ಬಂಧನ: ಕೇವಲ ₹200 ರೂಪಾಯಿಗೆ ಪಾಕಿಸ್ತಾನಕ್ಕೆ ಭಾರತದ ಗುಪ್ತ ಮಾಹಿತಿ ನೀಡುತ್ತಿದ್ದ ವ್ಯಕ್ತಿ ಅರೆಸ್ಟ್

01/12/2024

ಭಾರತೀಯ ಕೋಸ್ಟ್ ಗಾರ್ಡ್ ಹಡಗುಗಳ ಚಲನವಲನಗಳ ಕುರಿತಾದ ಮಾಹಿತಿಯನ್ನು ಪಾಕಿಸ್ತಾನಕ್ಕೆ ಹಂಚಿಕೊಂಡಿದ್ದಕ್ಕಾಗಿ ಭಯೋತ್ಪಾದನಾ ನಿಗ್ರಹ ದಳದ ಗುಜರಾತ್ ಘಟಕವು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಓರ್ವನನ್ನು ಬಂಧಿಸಿದೆ.

ಬಂಧಿತ ಆರೋಪಿಯನ್ನು ದೀಪೇಶ್‌ ಎಂದು ಗುರುತಿಸಲಾಗಿದ್ದು, ಈತ ಕೋಸ್ಟ್ ಗಾರ್ಡ್ ಬೋಟ್‌ಗಳ ಮಾಹಿತಿಯನ್ನು ಕಳುಹಿಸಲು ದಿನಕ್ಕೆ 200 ರೂಪಾಯಿ ಪಡೆಯುತ್ತಿದ್ದ. ಒಟ್ಟಾರೆಯಾಗಿ ಪಾಕಿಸ್ತಾನದ ಏಜೆಂಟ್‌ನಿಂದ ಸುಮಾರು 42 ಸಾವಿರ ರೂಪಾಯಿ ಪಡೆದಿದ್ದ ಎಂದು ತಿಳಿದು ಬಂದಿದೆ. ಆರೋಪಿ ದೀಪೇಶ್ ಗೋಹಿಲ್ ಎಂಬ ವ್ಯಕ್ತಿ ಓಖಾ ಬಂದರಿನಲ್ಲಿ ಕೆಲಸ ಮಾಡುತ್ತಿದ್ದು, ಈತ ಫೇಸ್‌ಬುಕ್ ಮೂಲಕ ಪಾಕಿಸ್ತಾನಿ ಗೂಢಚಾರರೊಂದಿಗೆ ಸಂಪರ್ಕ ಹೊಂದಿದ್ದ.

ಪತ್ತೇದಾರಿ ದೀಪೇಶ್‌ಗೆ ಫೇಸ್‌ಬುಕ್‌ನಲ್ಲಿ ‘ಸಹಿಮಾ’ ಎಂಬ ಹೆಸರಿನ ಅಕೌಂಟ್‌ ಮೂಲಕ ವ್ಯಕ್ತಿಯೊಬ್ಬ ಗೆಳೆತನ ಬೆಳೆಸಿದ್ದ. ಅಲ್ಲದೇ ವಾಟ್ಸಾಪ್‌ನಲ್ಲೂ ಅವನೊಂದಿಗೆ ಸಂಪರ್ಕದಲ್ಲಿದ್ದ ಪಾಕಿಸ್ತಾನಿ ಏಜೆಂಟರು ಓಖಾ ಬಂದರಿನಲ್ಲಿ ನಿಂತಿದ್ದ ಕೋಸ್ಟ್ ಗಾರ್ಡ್ ಬೋಟ್ ಹೆಸರು ಮತ್ತು ಸಂಖ್ಯೆಯನ್ನು ದೀಪೇಶ್ ಬಳಿ ಕೇಳಿದ್ದರು. ಸದ್ಯ ಏಜೆಂಟ್ ಗುರುತು ಇನ್ನೂ ಅಸ್ಪಷ್ಟವಾಗಿದೆ ಎಂದು ತಿಳಿದು ಬಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

FacebookTwitterWhatsappInstagramEmailTelegram

ಇತ್ತೀಚಿನ ಸುದ್ದಿ

Exit mobile version