ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಲಿವ್‌ ಇನ್ ಪಾಟ್ನರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಜೈಲಿಗೆ - Mahanayaka
4:20 PM Saturday 21 - September 2024

ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಲಿವ್‌ ಇನ್ ಪಾಟ್ನರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಜೈಲಿಗೆ

19/08/2023

ತನ್ನ ಲಿವ್-ಇನ್ ಪಾಟ್ನರ್ ಮೇಲೆ ಸ್ಕ್ರೂಡ್ರೈವರ್ ನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆರೋಪಿಯನ್ನು ಉತ್ತರ ಪ್ರದೇಶ ಮೂಲದ ಶಿವಂ ಕುಮಾರ್ ಎಂದು ಗುರುತಿಸಲಾಗಿದೆ. ಗುರುಗ್ರಾಮದ ರಾಜೀವ್ ಚೌಕ್ ನಿಂದ ಬಂಧಿಸಲಾಗಿದೆ. ಈ ಬಗ್ಗೆ ಸದರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಆರೋಪಿ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಲು ಒತ್ತಾಯಿಸಿದ್ದಾನೆ ಎಂದು ಯುವತಿ ನಿರಾಕರಿಸಿದ್ದಾಳೆ. ಇದಕ್ಕೆ ಅವನು ಅವಳ ಕುತ್ತಿಗೆಗೆ ಸ್ಕ್ರೂ ಡ್ರೈವರ್ ನಿಂದ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಿಳೆ ಸಲ್ಲಿಸಿದ ದೂರಿನ ಪ್ರಕಾರ, ಗುರುಗ್ರಾಮದ ಬಾಡಿಗೆ ಕೋಣೆಯಲ್ಲಿ ಆಕೆ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಅಲ್ಲಿ ಆಕೆಗೆ ಯುಪಿಯ ಕನೌಜ್ ನಿವಾಸಿ ಶಿವಂ ಕುಮಾರ್ ಪರಿಚಯವಾಗಿತ್ತು. ‘ನಾವು ನಮ್ಮ ಲಿವ್-ಇನ್ ಸಂಬಂಧವನ್ನು ಪ್ರಾರಂಭಿಸಿದ ಕೂಡಲೇ, ಶಿವಂ ಮದುವೆಯ ನೆಪದಲ್ಲಿ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದ. ಇತ್ತೀಚೆಗೆ, ಶಿವಂ ಮದುವೆಯಾಗಿದ್ದಾನೆ ಎಂದು ನನಗೆ ತಿಳಿಯಿತು’ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

‘ಗುರುವಾರ ಸಂಜೆ, ಅವನು ಬೈಕ್‌ನಲ್ಲಿ ಬಂದು ಅವನೊಂದಿಗೆ ಮತ್ತೆ ದೈಹಿಕ ಸಂಬಂಧ ಹೊಂದಲು ನನ್ನನ್ನು ಒತ್ತಾಯಿಸಿದ. ನಾನು ನಿರಾಕರಿಸಿದಾಗ ಅವನು ಕೋಪಗೊಂಡು ಸ್ಕ್ರೂಡ್ರೈವರ್ ನಿಂದ ನನ್ನ ಕುತ್ತಿಗೆಗೆ ಹಲ್ಲೆ ಮಾಡಿ ಓಡಿಹೋಗಿದ್ದಾನೆ” ಎಂದು ಅವರು ಹೇಳಿದರು. ನೆರೆಹೊರೆಯವರು ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.


Provided by

ದೂರಿನ ನಂತರ ಎಫ್ಐಆರ್ ದಾಖಲಿಸಲಾಗಿದೆ. ನಹರ್ಪುರ ಪೊಲೀಸ್ ಚೌಕಿಯ ಉಸ್ತುವಾರಿ ಸಬ್ ಇನ್ಸ್ ಪೆಕ್ಟರ್ ಸಂದೀಪ್ ಕುಮಾರ್ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ರಾಜೀವ್ ಚೌಕ್ ನಿಂದ ಬಂಧಿಸಲಾಗಿದ್ದು ವಿಚಾರಣೆ ನಡೆಸುತ್ತಿದ್ದೇವೆ. ಆತನನ್ನು ನಾಳೆ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಸಿಪಿ ವರುಣ್ ದಹಿಯಾ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ