ಸಾವಿನ ಏಟು: ಎದೆಗೆ ಗೂಳಿ ಕೊಂಬು ತಗುಲಿ ವ್ಯಕ್ತಿ ಸಾವು
ತಮಿಳುನಾಡಿನ ಶಿವಗಂಗಾದ ಕಾರೈಕುಡಿಯಲ್ಲಿ ಆಯೋಜಿಸಿದ್ದ ಮಂಜುವಿರಾಟ್ಟು ಎಂಬ ಗೂಳಿ ಪಳಗಿಸುವ ಕಾರ್ಯಕ್ರಮದಲ್ಲಿ 28 ವರ್ಷದ ವ್ಯಕ್ತಿಯೊಬ್ಬರು ಗೂಳಿ ದಾಳಿಗೆ ಬಲಿಯಾಗಿದ್ದಾರೆ.
ಈ ಕಾರ್ಯಕ್ರಮಕ್ಕೆ ಹತ್ತು ಎತ್ತುಗಳನ್ನು ತರಲಾಯಿತು ಮತ್ತು ಪ್ರತಿ ಗೂಳಿಯನ್ನು ಸುಮಾರು 30 ನಿಮಿಷಗಳ ಕಾಲ ನೆಲದ ಮೇಲೆ ಬಿಡಲಾಯಿತು. ಒಂಬತ್ತು ಪುರುಷರು ಅದನ್ನು ಪಳಗಿಸಲು ಪ್ರಯತ್ನಿಸಿದ್ದಾರೆ.
ಮಧುರೈ, ತಿರುಚ್ಚಿ, ರಾಮನಾಥಪುರಂ ಮತ್ತು ಪುದುಕೊಟ್ಟೈ ಸೇರಿದಂತೆ ಹಲವಾರು ಜಿಲ್ಲೆಗಳಿಂದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು.
ಇನ್ನು ಈ ಈವೆಂಟ್ ನ ನಾಲ್ಕನೇ ಸುತ್ತಿನಲ್ಲಿ ಸೇಲಂನ ಕಾರ್ತಿಕ್ ತನ್ನ ಕಡೆಗೆ ಧಾವಿಸುತ್ತಿದ್ದ ಗೂಳಿಯನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾಗ ಅದು ಅವನ ಎದೆಗೆ ಕೊಂಬುಗಳಿಂದ ಹೊಡೆದಿದೆ. ಇದೇ ವೇಳೆ ಆತ ನೆಲದ ಮೇಲೆ ಕುಸಿದುಬಿದ್ದಿದ್ದಾನೆ.
ಇನ್ನು ಈ ಘಟನೆಯ ನಂತರ ಕಾರ್ಯಕ್ರಮವನ್ನು ಮಧ್ಯದಲ್ಲಿ ನಿಲ್ಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕುಂದ್ರಾಕುಡಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth