ಯೂಟ್ಯೂಬ್ ಲೈವ್ ನಲ್ಲಿ ಚಾಲೆಂಜ್ | 1.5 ವೋಡ್ಕಾ ಸೇವಿಸಿ 60 ವರ್ಷದ ಅಜ್ಜ ಲೈವ್ ಸ್ಟ್ರೀಮ್ ನಲ್ಲಿಯೇ ಸಾವು
ವ್ಯಕ್ತಿಯೊಬ್ಬರ ಯೂಟ್ಯೂಬ್ ಲೈವ್ ಸ್ಟ್ರೀಮ್ ಮಾಡುವ ವೇಳೇ 1.5 ಲೀಟರ್ ವೋಡ್ಕಾ ಸೇವಿಸುವ ಚಾಲೆಂಜ್ ಹಾಕಿದ ವ್ಯಕ್ತಿ, ಲೈವ್ ನಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದ್ದು, ಯೂಟ್ಯೂಬರ್ ಗಳ ಚಾಲೆಂಜ್ ಸ್ವೀಕರಿಸಿದ ವ್ಯಕ್ತಿ ಲೈವ್ ವೇದಿಕೆಯಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಈ ವ್ಯಕ್ತಿ ರಷ್ಯಾದವನಾಗಿದ್ದು, ಈತನ ಹೆಸರು “ಅಜ್ಜ” ಎಂದಾಗಿದೆ. ಈ ಅಜ್ಜನಿಗೆ 60 ವರ್ಷ ವಯಸ್ಸಾಗಿದೆ. ಇಲ್ಲಿನ ಮಾಧ್ಯಮಗಳ ವರದಿಯ ಪ್ರಕಾರ, ಈ ಕೃತ್ಯಕ್ಕೆ ಓರ್ವ ಯೂಟ್ಯೂಬರ್ ಹಣ ನೀಡುವುದಾಗಿ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಚಿತ್ರ ವಿಚಿತ್ರ ಸವಾಲುಗಳನ್ನು ಹಾಕಿ ಹಣ ಮಾಡುವ ದಂಧೆ ಇದಾಗಿದೆ. ಯೂಟ್ಯೂಬ್ ನಲ್ಲಿ “ಥ್ರಾಶ್ ಸ್ಟ್ರೀಮ್” ಸ್ಟ್ರೀಮ್ ಪೈಕಿ ಈ ಸ್ಟ್ರೀಮ್ ವೈರಲ್ ಆಗಿದೆ.
ಈ ಥ್ರಾಶ್ ಸ್ಟ್ರೀಮ್ ನಲ್ಲಿ ಹಣವಿನಿಮಯ ಮಾಡಿಕೊಳ್ಳಲಾಗುತ್ತದೆ. ಅವಮಾನಕರ ಹಾಗೂ ಸ್ಟಂಟ್ ಗಳನ್ನು ಪ್ರದರ್ಶಿಸುವ ಸವಾಲನ್ನು ಎದುರಿಸಲಾಗುತ್ತದೆ. ಇಂತಹ ಸವಾಲಿನಲ್ಲಿ ಅಜ್ಜ ಕೂಡ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.
ಯೂಟ್ಯೂಬರ್ ಗಳಿಂದ ಹಣ ಪಡೆದು ಸವಾಲು ಸ್ವೀಕರಿಸಿದ್ದ ಅಜ್ಜ 1.5 ಲೀ.ವೋಡ್ಕಾ ಸೇವಿಸಿದ್ದು, ಲೈವ್ ನಲ್ಲಿಯೇ ವೇದಿಕೆಯ ಮೇಲೆ ಕುಸಿದು ಬಿದ್ದು, ಆತ ಮೃತಪಟ್ಟಿದ್ದಾನೆ ಮೃತಪಟ್ಟ ಬಳಿಕವೂ ಲೈವ್ ನಲ್ಲಿ ಅಜ್ಜನ ಮೃತದೇಹ ಕಾಣುತ್ತಿತ್ತು. ಈ ದೃಶ್ಯವನ್ನು ಕಂಡು ಯೂಟ್ಯೂಬ್ ಬಳಕೆದಾರರು ಬೆಚ್ಚಿ ಬಿದ್ದಿದ್ದಾರೆ.