ಪುತ್ರ, ಸಹೋದರ, ಸ್ನೇಹಿತರ ಎದುರೇ ಸಮುದ್ರದಲ್ಲಿ ಮುಳುಗಿ ವ್ಯಕ್ತಿ ಸಾವು
ಪುತ್ರ, ಸಹೋದರ ಮತ್ತು ಸ್ನೇಹಿತರ ಎದುರಲ್ಲೇ ಬೀಚ್ ನಲ್ಲಿ ನೀರಾಟವಾಡುತ್ತಿದ್ದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳೂರು ನಗರದ ಉಳ್ಳಾಲದ ಸೋಮೇಶ್ವರದಲ್ಲಿ ನಡೆದಿದೆ.
ಪ್ರಶಾಂತ್ (47), ಮೃತ ವ್ಯಕ್ತಿ. ಮಂಗಳೂರಿನ ಖಾಸಗಿ ಕಾಲೇಜಲ್ಲಿ ಬಸ್ ಚಾಲಕರಾಗಿದ್ದ ಅವರು, ಇಂದು ಪುತ್ರನಾದ ಚಿರಾಯು, ಸಹೋದರನ ಮಗ ವಂದನ್ ಮತ್ತು ಇತರರೊಂದಿಗೆ ಸೋಮೇಶ್ವರ ಬೀಚ್ ಗೆ ವಿಹಾರಕ್ಕೆ ತೆರಳಿದ್ದರು.
ಪ್ರತೀ ರವಿವಾರವೂ ಪ್ರಶಾಂತ್ ಅವರು ಸಮುದ್ರ ತೀರಕ್ಕೆ ವಿಹಾರಕ್ಕೆ ತೆರಳುತ್ತಿದ್ದರು. ಎಂದಿನಂತೆ ಇಂದು ಪ್ರಶಾಂತ್ ಸಮುದ್ರದಲ್ಲಿ ನೀರಾಟವಾಡುತ್ತಿದ್ದಾಗ ನೀರುಪಾಲಾಗಿ ಮೃತಪಟ್ಟಿದ್ದಾರೆ.
ಪ್ರಶಾಂತ್ ಅವರ ಪುತ್ರ ಚಿರಾಯು ಈಜು ಪರಿಣತನಾಗಿದ್ದು ತಕ್ಷಣ ಹಗ್ಗದಿಂದ ತಂದೆಯನ್ನು ನೀರಿನಿಂದ ಮೇಲಕ್ಕೆತ್ತಿ ದಡಕ್ಕೆ ಹಾಕಿದ್ದು, ಅದಾಗಲೇ ಪ್ರಶಾಂತ್ ರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka