ಎಟಿಎಂ ಒಡೆಯುತ್ತಿದ್ದ ವೇಳೆ ಎಟಿಎಂನಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ! | ಮುಂದೆ ನಡೆದದ್ದೇನು ಗೊತ್ತಾ?
ಚೆನ್ನೈ: ದರೋಡೆಗೆಂದು ಎಡಿಎಂ ಕೇಂದ್ರದೊಳಗೆ ನುಗ್ಗಿದ್ದ ಕಳ್ಳ ಎಟಿಎಂ ಒಡೆಯುತ್ತಿದ್ದ ವೇಳೆ ಎಟಿಎಂ ಮಷೀನ್ ಹಾಗೂ ಗೋಡೆಯ ಮಧ್ಯೆ ಸಿಕ್ಕಿಹಾಕಿಕೊಂಡಿದ್ದು, ಇದೀಗ ಆರೋಪಿಯು ಪೊಲೀಸರ ಅತಿಥಿಯಾಗಿದ್ದಾನೆ. ಎಟಿಎಂ ಕಳ್ಳನಿಗೆ ತನ್ನ ಕುಡಿತದ ಚಟವೇ ಮಾರಕವಾಗಿ ಪರಿಣಮಿಸಿದ್ದು, ಇದರಿಂದಾಗಿ ಸುಲಭವಾಗಿ ಪೊಲೀಸರ ಬಲೆಗೆ ಕಳ್ಳ ಬಿದ್ದಿದ್ದಾನೆ.
28 ವರ್ಷ ವಯಸ್ಸಿನ ಉಪೇಂದ್ರ ರಾಯ್ ಎಂಬ ಬಿಹಾರ ಮೂಲದ ಕಳ್ಳ ದರೋಡೆ ಮಾಡಲೆಂದು ಎಟಿಎಂ ಕೇಂದ್ರಕ್ಕೆ ಬಂದಿದ್ದಾನೆ. ಈತ ಕಳ್ಳತನಕ್ಕೆ ಬಂದ ವೇಳೆ ಕುಡಿದು ಚಿತ್ತಾಗಿದ್ದು, ತಾನ್ಯಾಕೆ ಬಂದಿದ್ದೇನೆ ಎನ್ನುವುದನ್ನು ಮಾತ್ರವೇ ನೆನಪಿನಲ್ಲಿಟ್ಟುಕೊಂಡಿದ್ದ. ಆದರೆ ತಾನೇನು ಮಾಡುತ್ತಿದ್ದೇನೆ ಎನ್ನುವುದು ಆತನಿಗೆ ತಿಳಿದಿರಲೇ ಇಲ್ಲ.
ಎಟಿಎಂ ಮಷೀನ್ ಒಡೆಯಲು ಆತ ಯತ್ನಿಸಿದ್ದಾನೆ. ಆದರೆ ಅದು ಸಾಧ್ಯವಾಗದೇ ಇದ್ದಾಗ ಎಟಿಎಂನ ಹಿಂದೆ ಸೇರಿಕೊಂಡು ಎಟಿಎಂ ಒಡೆಯಲು ಯತ್ನಿಸಿದ್ದಾನೆ. ಈ ವೇಳೆ ಆತ ಎಟಿಎಂನ ಹಿಂಬದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಮೊದಲೇ ಕಂಠಪೂರ್ತಿ ಕುಡಿದು ಚಿತ್ತಾಗಿದ್ದ ಆತನಿಗೆ ತನ್ನ ಬಲದಿಂದ ಎದ್ದು ಬರುವಷ್ಟು ಸಾಮರ್ಥ್ಯವೂ ಇರಲಿಲ್ಲ. ಹೀಗಾಗಿ ಎಟಿಎಂ ಹಿಂಬದಿಯಲ್ಲಿಯೇ ಆತ ಸಿಕ್ಕಿಹಾಕಿಕೊಂಡಿದ್ದಾನೆ.
ಕುಡುಕ ಕಳ್ಳ ಎಟಿಎಂ ಕೇಂದ್ರದೊಳಗೆ ಇಷ್ಟೆಲ್ಲ ಕಾರುಬಾರು ಮಾಡುತ್ತಿದ್ದರೂ ಎಟಿಎಂನ ಸೈರನ್ ಕೂಡ ಬಾರಿಸಿಕೊಳ್ಳದೇ ಕಳ್ಳನಿಗೆ ಸಹಕಾರ ನೀಡಿದೆ. ಆದರೆ, ಪಕ್ಕದ ಮನೆಯವರ ಚುರುಕಾದ ಕಿವಿಗೆ ಎಟಿಎಂ ಕೇಂದ್ರದೊಳಗೆ ಏನೋ ಸದ್ದು ಬರುತ್ತಿದೆ ಎನ್ನುವುದು ಕೇಳಿ ಬಂದಿದೆ. ಅವರು ಪರಿಶೀಲಿಸಿದಾಗ, ಗಾಳದಲ್ಲಿ ಸಿಕ್ಕಿಕೊಂಡ ಮೀನಿನಂತೆ ಕುಡುಕ ಕಳ್ಳ ಎಟಿಎಂ ಮಷೀನ್ ಹಿಂದೆ ಸಿಕ್ಕಿಹಾಕಿಕೊಂಡಿರುವ ದೃಶ್ಯ ಕಂಡು ಬಂದಿದೆ. ತಕ್ಷವೇ ಅವರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರ ಕೈಗೆ ಕಳ್ಳ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.
ಇನ್ನಷ್ಟು ಸುದ್ದಿಗಳು…
ಸಚಿವರಾದರೂ ಜೀಪ್ ನಿಂದ ಇಳಿದು ಸಾಮಾನ್ಯರಂತೆ ನಡೆದ ಸಚಿವ ಅಂಗಾರ! | ಇದು ಸರಳತೆ ಅಲ್ಲ, ವೈಫಲ್ಯ!
ತಾಯಾಣೆ ನಾನು ಅಷ್ಟೊಂದು ಹಣವನ್ನು ಎಂದಿಗೂ ನೋಡೇ ಇಲ್ಲ | ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ
ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದ ಟ್ರಕ್ : 8 ಕಾರ್ಮಿಕರ ದಾರುಣ ಸಾವು
ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ಮನೆಗೆ ಕರೆಸಿ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದ ಅತ್ಯಾಚಾರ, ಬ್ಲ್ಯಾಕ್ ಮೇಲ್
ಹಿಂದುತ್ವದ ಹಿತಾಸಕ್ತಿಯೂ ಜಾತಿಯ ಅನಿವಾರ್ಯತೆಯೂ | ನಾ ದಿವಾಕರ
“ಕೋತಿ ತಾನು ಕೆಡುವುದಲ್ಲದೇ ವನವನ್ನೆಲ್ಲ ಕೆಡಿಸ್ತು” | ಎನ್.ಮಹೇಶ್ ಬಿಜೆಪಿ ಸೇರ್ಪಡೆಗೆ ಎಸ್ ಡಿಪಿಐ ಆಕ್ರೋಶ