ಸಮಯಕ್ಕೆ ಸರಿಯಾಗಿ ಊಟ ನೀಡದ್ದಕ್ಕೆ ಕೋಪ: ಪತ್ನಿಯನ್ನು ಕೊಂದ ಪತಿ

ಸಮಯಕ್ಕೆ ಸರಿಯಾಗಿ ಆಹಾರ ನೀಡದೇ ಇರುವುದಕ್ಕೆ ಪತ್ನಿಯನ್ನು ಪತಿ ಇರಿದುಕೊಂದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಚೆನ್ನೈಯ ತಿರುಮುಲ್ಲೈಯ ವಿನಾಯಕ ಎಂಬವ ತನ್ನ ಪತ್ನಿ ಧನಲಕ್ಷ್ಮಿಯನ್ನ ಹೀಗೆ ಇರಿದು ಕೊಂದಿದ್ದಾನೆ.
ಧನಲಕ್ಷ್ಮಿ ಅವರ ಆರೋಗ್ಯ ಸರಿ ಇಲ್ಲದೆ ಇರುವುದರಿಂದ ಸರಿಯಾದ ಸಮಯಕ್ಕೆ ಊಟ ಬಡಿಸಲು ಸಾಧ್ಯವಾಗಲಿಲ್ಲ. ಇದರಿಂದ ಪತಿ ವಿನಾಯಕ ಮತ್ತು ಧನಲಕ್ಷ್ಮಿ ನಡುವೆ ಮಾತಿಗೆ ಮಾತು ಬೆಳೆಯಿತು. ಅಡುಗೆ ಮನೆಯಲ್ಲಿದ್ದ ಚೂರಿಯನ್ನು ಎತ್ತಿಕೊಂಡ ವಿನಾಯಕ ಪತ್ನಿಗೆ ಇರಿದಿದ್ದಾನೆ. ಅಲ್ಲದೇ ಕತ್ತನ್ನು ಕೊಯ್ದಿದ್ದಾನೆ. ಮಕ್ಕಳು ಮನೆಗೆ ಮರಳಿ ಬಂದಾಗ ತಾಯಿ ಮೃತಪಟ್ಟಿರುವುದು ಗೊತ್ತಾಗಿದೆ ಬಳಿಕ ಮಕ್ಕಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.. ವಿನಾಯಕನನ್ನು ವಿಚಾರಿಸಿ ವಶಕ್ಕೆ ಪಡೆದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj