ಪ್ರಯಾಗ್ ರಾಜ್ ಹೋಟೆಲ್ ಕೊಠಡಿಯಲ್ಲಿ ಪತ್ನಿಯನ್ನು ಕೊಂದ ಪತಿ: 'ಕುಂಭಮೇಳದಲ್ಲಿ ಕಳೆದುಹೋಗಿದ್ದಳು' ಎಂದು ಸುಳ್ಳು ಹೇಳಿದ ಕಿಲ್ಲರ್ - Mahanayaka
10:38 PM Sunday 23 - February 2025

ಪ್ರಯಾಗ್ ರಾಜ್ ಹೋಟೆಲ್ ಕೊಠಡಿಯಲ್ಲಿ ಪತ್ನಿಯನ್ನು ಕೊಂದ ಪತಿ: ‘ಕುಂಭಮೇಳದಲ್ಲಿ ಕಳೆದುಹೋಗಿದ್ದಳು’ ಎಂದು ಸುಳ್ಳು ಹೇಳಿದ ಕಿಲ್ಲರ್

23/02/2025

ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಂದ ಘಟನೆ ನಡೆದಿದೆ. ಪತಿ ಪತ್ನಿ ಇಬ್ಬರು ಮಹಾ ಕುಂಭದಲ್ಲಿ ಪವಿತ್ರ ಸ್ನಾನ ಮಾಡಲು ಅನೇಕ ಭಕ್ತರಂತೆ ಪ್ರಯಾಗ್ ರಾಜ್ ಗೆ ಭೇಟಿ ನೀಡಿದ್ದರು. ಪತಿ ಅಶೋಕ್ ಬಾಲ್ಮಿಕಿ ಕೂಡ ತ್ರಿವೇಣಿ ಸಂಗಮದಲ್ಲಿ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು.

ರಾತ್ರಿಯ ಹೊತ್ತಿಗೆ ದಂಪತಿ ಲಾಡ್ಜ್ ಗೆ ಹೋಗಿದ್ದಾರೆ. ಆರೋಪಿ ಅಶೋಕ್ ತನ್ನ ಹೆಂಡತಿ ಮೀನಾಕ್ಷಿಯನ್ನು ಮರುದಿನ ಬೆಳಿಗ್ಗೆ ಪವಿತ್ರ ಸ್ನಾನಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದಾರೆ. ಮರುದಿನ ಮೀನಾಕ್ಷಿಯ ರಕ್ತಸಿಕ್ತ ದೇಹವು ಅವರ ಕೋಣೆಯಲ್ಲಿ ಸಿಕ್ಕಿದೆ. ಆದರೆ ಆರೋಪಿ ಅಶೋಕ್ ನಾಪತ್ತೆಯಾಗಿದ್ದಾರೆ. ಈ ಮಧ್ಯೆ ಮಹಾ ಕುಂಭ ಮೇಳದಲ್ಲಿ ಮೀನಾಕ್ಷಿ “ಕಳೆದುಹೋಗಿದ್ದಾರೆ” ಎಂದು ಅವರ ಮಕ್ಕಳಿಗೆ ತಿಳಿಸಿದ್ದಾನೆ.

ಪೊಲೀಸರ ಪ್ರಕಾರ, ದಂಪತಿ ಝುನ್ಸಿ ಪ್ರದೇಶದ ಲಾಡ್ಜ್ ನಲ್ಲಿ ಚೆಕ್ ಇನ್ ಮಾಡಿದ್ದಾರೆ. ಲಾಡ್ಜ್ ಮಾಲೀಕರು ದಂಪತಿಗೆ 500 ರೂ.ಗೆ ಕೊಠಡಿಯನ್ನು ನೀಡಿದ್ದಾರೆ. ಆದರೆ ಅವರ ಗುರುತಿನ ಚೀಟಿಗಳನ್ನು ಕೇಳಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ ಅಶೋಕ್ ವಾಶ್ ರೂಮ್ ನಲ್ಲಿ ಮೀನಾಕ್ಷಿಯನ್ನು ಹರಿತವಾದ ಆಯುಧದಿಂದ ಕೊಂದು ಕೋಣೆಯಿಂದ ಎಸ್ಕೇಪ್ ಆಗಿದ್ದಾನೆ. ಪೊಲೀಸರ ಪ್ರಕಾರ, ಅಶೋಕ್ ಅವರು ಮಹಾ ಕುಂಭ ಮೇಳದಲ್ಲಿ ತಮ್ಮ ಹೆಂಡತಿಯನ್ನು ಕಳೆದುಕೊಂಡಿದ್ದಾರೆ ಎಂದು ತಮ್ಮ ಮಕ್ಕಳಿಗೆ ಮಾಹಿತಿ ನೀಡಿದರು. ಮರುದಿನ ಬೆಳಿಗ್ಗೆ ಮೀನಾಕ್ಷಿಯ ರಕ್ತಸಿಕ್ತ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ