12 ಅಡಿ ಉದ್ದದ ಹಾವಿನ ಹೆಡೆಗೆ ಚುಂಬಿಸಿದ ವ್ಯಕ್ತಿ: ಎದೆ ಝಲ್ ಎನಿಸುವ ವಿಡಿಯೋ - Mahanayaka

12 ಅಡಿ ಉದ್ದದ ಹಾವಿನ ಹೆಡೆಗೆ ಚುಂಬಿಸಿದ ವ್ಯಕ್ತಿ: ಎದೆ ಝಲ್ ಎನಿಸುವ ವಿಡಿಯೋ

nic
17/05/2023

ಸುಮಾರು 12 ಅಡಿ  ಉದ್ದದ ಬೃಹತ್ ಕಾಳಿಂಗ ಸರ್ಪಕ್ಕೆ ವ್ಯಕ್ತಿಯೋರ್ವ ಚುಂಬಿಸಿದ ಎದೆ ಝಲ್ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ನಿಕ್  ಎಂಬ ವ್ಯಕ್ತಿ 12 ಅಡಿ ಉದ್ದದ ಹಾವನ್ನು ಯಾವುದೇ ಅಂಜಿಕೆಯಿಲ್ಲದೇ ಹಾವಿನ ತಲೆಯ ಹಿಂಬದಿಗೆ ಮುತ್ತನ್ನಿಡುವ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಈ ವಿಡಿಯೋ ನೆಟ್ಟಿಗರ ಮೆಚ್ಚುಗೆ ಪಡೆದುಕೊಂಡಿದೆ.

ಸಾಮಾನ್ಯವಾಗಿ ಸಣ್ಣ ಹಾವನ್ನು ಕಂಡರೂ ಜನರು ಬೆಚ್ಚಿಬೀಳುತ್ತಾರೆ.  ಆದರೆ ಈ ಯುವಕ ಬೃಹತ್ ಹಾವನ್ನು ಹಿಡಿದು ಅದರ ಹೆಡೆಗೆ ಮುತ್ತನ್ನಿಟ್ಟಿದ್ದಾನೆ. ಹಾವು ಸ್ವಲ್ಪ ತಿರುಗಿದರೆ ಮುಂದಿನ ಪರಿಣಾಮ ಹೀಗಿರಬಹುದು ಎನ್ನುವುದನ್ನು ಊಹಿಸಲು ಕಷ್ಟ ಸಾಧ್ಯವಾಗಿದೆ.

ನಿಕ್ ಬಿಷಪ್ ಎಂಬ ಹೆಸರಿನ ಈ  ವ್ಯಕ್ತಿ ಪ್ರಾಣಿಗಳನ್ನು ನಿಯಂತ್ರಿಸುವಂತಹ ಹಲವು ವಿಡಿಯೋಗಳನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಾನು ಸರೀಸರಪಗಳೊಂದಿಗೆ ಸಂವಹನ ಮಾಡುತ್ತಿರುವಂತಹ ಹಲವು ಪೋಸ್ಟ್ ಗಳು ಅವರ ಖಾತೆಯಲ್ಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ