ಮ್ಯಾನ್ ಆಫ್ ದ ಮ್ಯಾಚ್ ಗೆದ್ದವನಿಗೆ 5 ಲೀ. ಪೆಟ್ರೋಲ್ ಗಿಫ್ಟ್: ವೈರಲ್ ಚಿತ್ರ - Mahanayaka

ಮ್ಯಾನ್ ಆಫ್ ದ ಮ್ಯಾಚ್ ಗೆದ್ದವನಿಗೆ 5 ಲೀ. ಪೆಟ್ರೋಲ್ ಗಿಫ್ಟ್: ವೈರಲ್ ಚಿತ್ರ

02/03/2021

ಭೋಪಾಲ್: ಪೆಟ್ರೋಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಟ್ರೋಲ್ ಗಳು ಓಡಾಡುತ್ತಿವೆ. ಇದೀಗ ಸದ್ಯದ ಪರಿಸ್ಥಿತಿಯನ್ನು ವಿವರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೆಟ್ರೋಲ್ ಬೆಲೆ 100 ರೂ. ತಲುಪಿದೆ. ಇದೇ ಸಂದರ್ಭದಲ್ಲಿ ಕ್ರಿಕೆಟ್ ಮ್ಯಾಚ್ ನಲ್ಲಿ ಗೆದ್ದ ವ್ಯಕ್ತಿಯೊಬ್ಬನಿಗೆ  ಮ್ಯಾನ್ ಆಫ್ ಮ್ಯಾಚ್ ಗೆದ್ದಿರುವುದಕ್ಕೆ 5 ಲೀಟರ್ ಪೆಟ್ರೋಲ್ ಬಹುಮಾನವಾಗಿ ನೀಡುವ ಮೂಲಕ ಇಂಧನ ಬೆಲೆ ಏರಿಕೆಯನ್ನು ಅಣಕಿಸಲಾಗಿದ್ದು, ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭೋಪಾಲ್ ಕಾಂಗ್ರೆಸ್ ಮುಖಂಡ ಮನೋಜ್ ಶುಕ್ಲಾ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದ್ದರು. ಈ ಪಂದ್ಯದಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಗೆದ್ದಿರುವ ಸಲಾವುದ್ದೀನ್ ಅಬ್ಬಾಸಿ ಅವರಿಗೆ 5 ಲೀಟರ್ ಪೆಟ್ರೋಲ್ ನೀಡಲಾಯಿತು.


Provided by

whatsapp

ಇತ್ತೀಚಿನ ಸುದ್ದಿ