ಮೆಕ್ ಡೊನಾಲ್ಡ್ಸ್ ಆಹಾರದಲ್ಲಿ ಸತ್ತ ಹಲ್ಲಿ ಪತ್ತೆ: ಹೊಟೇಲ್ ಗೆ ಬೀಗ
ಮಹಾರಾಷ್ಟ್ರ: ಪ್ರಮುಖ ಫಾಸ್ಟ್ ಫುಡ್ ಸಂಸ್ಥೆಯಾಗಿರುವ ಮೆಕ್ ಡೊನಾಲ್ಡ್ಸ್‌ನ ಆಹಾರದಲ್ಲಿ ಸತ್ತ ಹಲ್ಲಿ ಪತ್ತೆಯಾಗಿರುವ ಘಟನೆ. ಮಹಾರಾಷ್ಟ್ರದ ಅಹಮದಾಬಾದ್ ನಲ್ಲಿ ನಡೆದಿದೆ.
ಅಹಮದಾಬಾದ್ ನ ಸೈನ್ಸ್ ಸಿಟಿ ರಸ್ತೆಯಲ್ಲಿರುವ ಮೆಕ್ ಡೊನಾಲ್ಡ್ ನ ಔಟ್ ಲೆಟ್ ನಲ್ಲಿ ನೀಡಲಾದ ಪಾನೀಯದಲ್ಲಿ ಹಲ್ಲಿ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಔಟ್ಲೆಟ್ ಅನ್ನು ಮುಚ್ಚಿ ಸೀಲ್ ಮಾಡಿದೆ.
ಮೆಕ್ ಡೊನಾಲ್ಡ್ಸ್‌ನ ಇಬ್ಬರು ಯುವಕರು ಕೋಕ್ ಕುಡಿಯುವಾಗ ಈ ಪಾನೀಯದಲ್ಲಿ ಹಲ್ಲಿ ಪತ್ತೆಯಾಗಿದೆ. ಅವರಲ್ಲಿ ಒಬ್ಬರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಪಾನೀಯದಲ್ಲಿ ಸತ್ತ ಹಲ್ಲಿ ಇದೆ ಎಂದು ಮ್ಯಾನೇಜರ್ ಗೆ ದೂರು ನೀಡಿದಾಗ, ಮ್ಯಾನೇಜರ್ ಪಾನೀಯದ ಮೊತ್ತವನ್ನು ಹಿಂದಿರುಗಿಸಬಹುದೆಂದು ಮಾತ್ರ ತಿಳಿಸಿದ್ದರು ಎಂದು ಅವರು ಹೇಳಿದರು. ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬಳಿಕ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ಮಕ್ಕಳಿಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು
ಊಟ ಇಲ್ಲ ಎಂದಿದ್ದಕ್ಕೆ ಹೊಟೇಲ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಮಗನ ತಪ್ಪಿನಿಂದ 3.30 ಲಕ್ಷ ರೂಪಾಯಿ ದಂಡ ಪಾವತಿಸಿದ ತಂದೆ!
ಎಲ್ಲ ಮಸೀದಿ ಅಗೆಯೋಣ, ಶಿವಲಿಂಗ ಸಿಕ್ಕರೆ ನಮ್ಮದು, ಹೆಣ ಸಿಕ್ಕರೆ ನಿಮ್ಮದು: ಬಿಜೆಪಿ ಮುಖಂಡನ ಹೇಳಿಕೆ!
ಮಸೀದಿಯಲ್ಲಿ ದೈವ ಸಾನಿಧ್ಯ ಇತ್ತು: ತಾಂಬೂಲ ಪ್ರಶ್ನೆಯಲ್ಲಿ ಜ್ಯೋತಿಷ್ಯ ಗೋಪಾಲಕೃಷ್ಣ ಪಣಿಕ್ಕರ್