ಮಂಚದಡಿಯಲ್ಲಿ ಮೊಸಳೆ ಬಂದರೂ ಗೊತ್ತಾಗಲಿಲ್ಲ: ಗಡದ್ದಾಗಿ ಮಲಗಿದ್ದವ ಬೆಳಗ್ಗೆದ್ದು ಮೊಸಳೆ ನೋಡಿ ಹೈರಾಣು..!
ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿರುವ ಹಳ್ಳಿಯೊಂದರ ಭೀರಾ ಪೊಲೀಸ್ ಠಾಣೆ ಬಳಿಯ ಲಾಲಾ ರಾಮ್ ಅವರ ಮನೆಯಲ್ಲಿ ಮೊಸಳೆಯೊಂದು ಮಂಚದಡಿಯಲ್ಲಿ ವಿರಮಿಸಿರುವ ಅಪರೂಪದ ಘಟನೆ ನಡೆದಿದೆ. ವಿಶೇಷ ಏನಪ್ಪ ಅಂದ್ರೆ ಮಂಚದಡಿಯಲ್ಲಿ ಮೊಸಳೆ ಇರುವ ಸುಳಿವೇ ಇಲ್ಲದೆ ವ್ಯಕ್ತಿಯೊಬ್ಬ ಅದೇ ಮಂಚದ ಮೇಲೆ ಗಡದ್ದಾಗಿ ನಿದ್ದೆ ಮಾಡಿದ್ದ.
ರಾತ್ರಿಯೆಲ್ಲಾ ಮಂಚದಡಿಯಲ್ಲೇ ಮೊಸಳೆ ಮಲಗಿದ್ದರೂ, ಅದೃಷ್ಟವಶಾತ್ ಯಾವುದೇ ಅನಾಹುತ ನಡೆಸಿಲ್ಲ.ಮರುದಿನ ಬೆಳಗ್ಗೆ ಮಂಚದಡಿಯಲ್ಲಿ ಮೊಸಳೆ ಇರುವುದು ಗಮನಕ್ಕೆ ಬಂದಿದ್ದು ಮನೆಯವರು ಹೌಹಾರಿದ್ದಾರೆ.
ಗಾಬರಿ ಬಿದ್ದ ಮನೆಯವರು ತಕ್ಷಣವೇ ಮನೆಯಿಂದ ಹೊರಬಂದು ಗ್ರಾಮಸ್ಥರಿಗೆ ಸುದ್ದಿ ತಿಳಿಸಿದ್ದು, ಕ್ಷಣಮಾತ್ರದಲ್ಲಿ ಈ ಸುದ್ದಿ ಊರೆಲ್ಲಾ ಕ್ಷಣ ಹಬ್ಬಿ, ಗ್ರಾಮಸ್ಥರು ಬಂದು ಸೇರಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಬರುವ ಮುನ್ನವೇ ಗ್ರಾಮಸ್ಥರು ಮೊಸಳೆಯನ್ನು ಹಿಡಿದು ಸುರಕ್ಷಿತವಾಗಿ ಅದರ ತಾಣಕ್ಕೆ ಬಿಟ್ಟಿದ್ದಾರೆ. ಮೊಸಳೆಯ ಬಾಯಿಯನ್ನು ಹಗ್ಗದಿಂದ ಬಿಗಿದು ಕಟ್ಟಿ ನಂತರ ಅದನ್ನು ಚೀಲವೊಂದರಲ್ಲಿ ಇರಿಸಿದ್ದಾರೆ. ಬಳಿಕ ಅರಣ್ಯ ಇಲಾಖೆ ಸಹಾಯದಿಂದ ಮೊಸಳೆಯನ್ನು ಶಾರದಾ ನದಿಗೆ ಬಿಡಲಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw