ಹಳೆಯ ಗರ್ಲ್ ಫ್ರೆಂಡ್ ಗೆ ನೀಡಿದ್ದ ಉಂಗುರ ಕದ್ದು, ಹೊಸ ಗರ್ಲ್ ಫ್ರೆಂಡ್ ಗೆ ನೀಡಿ ಸಿಕ್ಕಿ ಬಿದ್ದ ಯುವಕ
ಫ್ಲೋರಿಡಾ: ಈ ಯುವಕನ ದುರ್ಗತಿಯೋ, ಹವ್ಯಾಸವೋ ಗೊತ್ತಿಲ್ಲ, ಹಳೆಯ ಗರ್ಲ್ ಫ್ರೆಂಡ್ ಗೆ ಕೊಟ್ಟಿದ್ದ ಉಂಗುರವನ್ನು ಕದ್ದು, ಹೊಸ ಗರ್ಲ್ ಫ್ರೆಂಡ್ ಗೆ ವ್ಯಕ್ತಿಯೋರ್ವ ಪ್ರಪೋಸ್ ಮಾಡಿದ ಘಟನೆ ಫ್ಲೋರಿಡಾದಲ್ಲಿ ನಡೆದಿದ್ದು, ಇದೀಗ ಹಳೆಯ ಗರ್ಲ್ ಫ್ರೆಂಡ್ ಈ ವಿಚಾರ ತಿಳಿಯುತ್ತಿದ್ದಂತೆಯೇ ಇದೀಗ ತಲೆಮರೆಸಿಕೊಂಡಿದ್ದಾನೆ.
48 ವರ್ಷದ ಜೋಸೆಫ್ ಡೇವಿಸ್ ಈ ಹಿಂದೆಯೇ ಯುವತಿಯೊಬ್ಬಳಿಗೆ ಉಂಗುರ ನೀಡಿ, ಪ್ರಪೋಸ್ ಮಾಡಿದ್ದ. ಆಕೆ ಈತನ ಪ್ರೀತಿಗೆ ಒಪ್ಪಿದ್ದಳು. ಆ ಬಳಿಕ ಇಬ್ಬರು ಕೂಡ ಚೆನ್ನಾಗಿಯೇ ಇದ್ದರು. ಆದರೆ, ಇತ್ತೀಚೆಗಷ್ಟೇ, ತನ್ನ ಪ್ರಿಯತಮನ ಫೇಸ್ ಬುಕ್ ವಾಲ್ ನೋಡುವಾಗ ಆತ ಯಾವುದೋ ಯುವತಿಯ ಜೊತೆಗಿರುವ ಫೋಟೋ ಕಂಡು ಬಂದಿದೆ.
ಈ ವೇಳೆ ಯುವತಿಯ ಫೋಟೋದಲ್ಲಿ ಈಕೆಗೆ ನೀಡಿದಂತಹದ್ದೇ ಉಂಗುರ ಆಕೆಯ ಬಳಿ ಕೂಡ ಇರುವುದು ಪತ್ತೆಯಾಗಿತ್ತು. ಯಾಕೋ ಅನುಮಾನ ಬಂದು ಯುವತಿ ತಕ್ಷಣ ತನ್ನ ಆಭರಣಗಳ ಬಾಕ್ಸ್ ನೋಡಿದ್ದಾಳೆ. ಈ ವೇಳೆ ಉಂಗೂರ ಕಳವಾಗಿರುವುದು ಪತ್ತೆಯಾಗಿದೆ. ಈ ವಿಚಾರ ತನ್ನ ಹಳೆಯ ಗರ್ಲ್ ಫ್ರೆಂಡ್ ಗೆ ತಿಳಿದಿದೆ ಎನ್ನುವುದು ತಿಳಿಯುತ್ತಿದ್ದಂತೆಯೇ ಜೋಸೆಫ್ ತಲೆ ಮರೆಸಿಕೊಂಡಿದ್ದಾನೆ.
ಜೋಸೆಫ್ ನ ಅನ್ಯಾಯದ ವಿರುದ್ಧ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಯನ್ನು ಹುಡುಕಾಟ ನಡೆಸುತ್ತಿದ್ದಾರೆ.