ಜನನಿಬಿಡ ರಸ್ತೆ ಮಧ್ಯೆ ಹೂವು ಖರೀದಿಗೆ ಕಾರನ್ನು ನಿಲ್ಲಿಸಿದ ವ್ಯಕ್ತಿ: ಬಂದೂಕನ್ನು ಹಿಡಿದು ಜನರಿಗೆ ಬೆದರಿಕೆ!
ಜನನಿಬಿಡ ರಸ್ತೆಯ ಮಧ್ಯದಲ್ಲಿ ವ್ಯಕ್ತಿಯೊಬ್ಬ ತನ್ನ ಕಾರನ್ನು ನಿಲ್ಲಿಸಿ ನಂತರ ಸಾರ್ವಜನಿಕವಾಗಿ ಬಂದೂಕು ತೋರಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಆನ್ ಲೈನ್ ನಲ್ಲಿ ವೈರಲ್ ಆಗಿದೆ. ಈ ಘಟನೆಯು ಪೊಲೀಸ್ ಠಾಣೆಯಿಂದ ಕೇವಲ 50 ಮೀಟರ್ ದೂರದಲ್ಲಿ ನಡೆದಿದ್ದರಿಂದ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ವೀಡಿಯೊದಲ್ಲಿ, ನೀಲಿ ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಹೂವುಗಳನ್ನು ಖರೀದಿಸಲು ಜನದಟ್ಟಣೆಯ ಬೀದಿಯ ಮಧ್ಯದಲ್ಲಿ ತನ್ನ ಕಾರನ್ನು ನಿಲ್ಲಿಸುವುದನ್ನು ಕಾಣಬಹುದು. ಆಗ ಟ್ರಾಫಿಮ್ ಜಾಮ್ ಹೆಚ್ಚಾಗುತ್ತಿದ್ದಂತೆ, ನಿರಾಶೆಗೊಂಡ ಪ್ರಯಾಣಿಕರು ನಿರಂತರವಾಗಿ ಹಾರ್ನ್ ಮಾಡಿದ್ದಾರೆ.
ದಾರಿಹೋಕರೊಬ್ಬರು ಇದಕ್ಕೆ ಆಕ್ಷೇಪಿಸಿದಾಗ, ಕೈಯಲ್ಲಿ ಬಂದೂಕು ಹಿಡಿದ ಇನ್ನೊಬ್ಬ ವ್ಯಕ್ತಿ ಹೊರಬಂದು ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಅಲ್ಲದೇ ಆರೋಪಿತ ವ್ಯಕ್ತಿಯು ಅಲ್ಲಿದ್ದವರನ್ನು ನಿಂದಿಸಲು ಪ್ರಾರಂಭಿಸಿದಾಗ ವಿಷಯವು ಉಲ್ಬಣಗೊಂಡಿತು.
ವಾಹನಗಳು ಸ್ಥಗಿತಗೊಂಡಿದ್ದರಿಂದ ಸಂಪೂರ್ಣ ಟ್ರಾಫಿಕ್ ಜಾಮ್ ಗೆ ಕಾರಣವಾಯಿತು.
ಪ್ರಸ್ತುತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ನಜೀರಾಬಾದ್ ಪೊಲೀಸ್ ಠಾಣೆಗೆ ಹತ್ತಿರದಲ್ಲಿದ್ದರೂ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj