ಮಣ್ಣಿನಡಿಯಲ್ಲಿ ಸಿಲುಕಿ “ನನ್ನನ್ನು ಕಾಪಾಡಿ” ಎಂದು ಅಂಗಲಾಚುತ್ತಿರುವ ವ್ಯಕ್ತಿ!
ವಯನಾಡ್: ವಯನಾಡಿನ ಮುಂಡಕ್ಕೈ ಭೂಕುಸಿತದಿಂದಾಗಿ ಮಣ್ಣಿನಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದೆ. ಮುಂಡಕೈ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಅರ್ಧ ದೇಹ ಮಣ್ಣಿನಡಿಯಲ್ಲಿ ಸಿಲುಕಿದ್ದು, ಅವರು ಸಹಾಯಕಕ್ಕಾಗಿ ಕೂಗಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಭೂ ಕುಸಿತದ ಪರಿಣಾಮ ಮುಂಡಕೈ ಪ್ರದೇಶವು ಪ್ರತ್ಯೇಕವಾಗಿದೆ. ಈ ಪ್ರದೇಶಕ್ಕೆ ಸಂಚರಿಸಲು ಸಾಧ್ಯವಾಗುತಿಲ್ಲ. ಆ ವ್ಯಕ್ತಿ ನನ್ನನ್ನು ರಕ್ಷಿಸಿ ಎಂದು ಕೂಗಾಡುತ್ತಿದ್ದು, ಯಾರು ಕೂಡ ಸ್ಥಳಕ್ಕೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿನ ಬ್ಲಾಕ್ ಪಂಚಾಯತ್ ಸದಸ್ಯ ರಾಘವನ್ ಅವರು ಈ ವಿಡಿಯೋಗಳನ್ನು ಸುದ್ದಿವಾಹಿನಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಎನ್ ಡಿಆರ್ ಎಫ್ ತಂಡ ಸ್ಥಳಕ್ಕೆ ತೆರಳಿದೆ.
ಚುರಲ್‌ಮಲಾ ಮತ್ತು ಮುಂಡಕೈ ಪ್ರದೇಶವು ಭೂಕುಸಿತದಿಂದ ಪ್ರತ್ಯೇಕಗೊಂಡಿದೆ. ಈ ಗ್ರಾಮಕ್ಕೆ ಜನರು ತೆರಳಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಮನೆಗಳಿದ್ದ ಪ್ರದೇಶಗಳಲ್ಲಿ ಕೇವಲ ಕಲ್ಲು ಮಣ್ಣುಗಳ ರಾಶಿ ಮಾತ್ರವೇ ಕಂಡು ಬರುತ್ತಿದೆ.
ಇದೇ ಪ್ರದೇಶದಲ್ಲಿ ಈ ವ್ಯಕ್ತಿ ಅರ್ಧ ನೆಲದಲ್ಲಿ ಹೂತು ಹೋದ ಸ್ಥಿತಿಯಲ್ಲಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾನೆ. ಮೆಪ್ಪಾಡಿ ಮುಂಡಕೈ ಸರಕಾರಿ ಯುಪಿ ಶಾಲೆ ಬಳಿ ಈತ ಸಿಲುಕಿರುವುದಾಗಿ ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: