ಟಿಕೆಟ್ ಇಲ್ಲದೇ ರೈಲು ಪ್ರಯಾಣ: ಟಿಕೆಟ್ ಕಲೆಕ್ಟರ್ ಬಂದಾಗ ಟಾಯ್ಲೆಟ್ ಗೆ ಹೋಗಿ ಸಿಗರೇಟ್ ಸೇದಿದ ಭೂಪ..! - Mahanayaka
6:16 PM Thursday 12 - December 2024

ಟಿಕೆಟ್ ಇಲ್ಲದೇ ರೈಲು ಪ್ರಯಾಣ: ಟಿಕೆಟ್ ಕಲೆಕ್ಟರ್ ಬಂದಾಗ ಟಾಯ್ಲೆಟ್ ಗೆ ಹೋಗಿ ಸಿಗರೇಟ್ ಸೇದಿದ ಭೂಪ..!

10/08/2023

ಟಿಕೆಟ್ ಇಲ್ಲದೇ ವಂದೇ ಭಾರತ್ ರೈಲಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೊಬ್ಬ ಟಿಕೆಟ್ ಕಲೆಕ್ಟರ್ ಗಳ ಕಣ್ತಪ್ಪಿಸಲು ಟಾಯ್ಲೆಟ್ ಗೆ ಹೋಗಿ ಅಲ್ಲಿ ಸಿಗರೇಟ್ ಸೇದುವ ಮೂಲಕ ಅವಾಂತರ ಸೃಷ್ಟಿಸಿದ ಘಟನೆ ತಿರುಪತಿ-ಸಿಕಂದರಾಬಾದ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ.

ರೈಲು ಸಂಖ್ಯೆ – 20702 ರ ಸಿ-13 ಬೋಗಿಯಲ್ಲಿ ಆಂಧ್ರಪ್ರದೇಶದ ಗುಡೂರು ಮೂಲಕ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ರೈಲಿನ ಬೋಗಿಯ ಟಾಯ್ಲೆಟ್ ನಿಂದ ಹೊಗೆ ಬರುತ್ತಿದ್ದ ಕಾರಣ ಅಪಾಯದ ಕರೆಗಂಟೆ ಬಾರಿಸಿದೆ. ಅಲ್ಲದೇ ಆಟೋಮ್ಯಾಟಿಕ್ ಬೆಂಕಿ ನಿಯಂತ್ರಕ ವ್ಯವಸ್ಥೆ ಕಾರ್ಯಪ್ರವೃತ್ತಗೊಂಡ ಕಾರಣ ರೈಲು ನಿಲುಗಡೆಗೊಂಡಿದೆ.

ಟಿಕೆಟ್ ಪಡೆದುಕೊಳ್ಳದ ವ್ಯಕ್ತಿಯೊಬ್ಬ ತಿರುಪತಿಯಲ್ಲಿ ರೈಲನ್ನು ಹತ್ತಿಸಿ-13 ಬೋಗಿಯಲ್ಲಿರುವ ಟಾಯ್ಲೆಟ್ ಒಳಹೊಕ್ಕು ಲಾಕ್ ಮಾಡಿದ್ದಾನೆ.

ಆ ವ್ಯಕ್ತಿ ಧೂಮಪಾನ ಮಾಡಿದ ಕಾರಣ ಟಾಯ್ಲೆಟ್ ಒಳಗಿದ್ದ ಸ್ವಯಂಚಾಲಿತ ಬೆಂಕಿ ನಿಯಂತ್ರಕ ವ್ಯವಸ್ಥೆ ಚಾಲನೆಗೊಂಡಿದೆ. ಮುನ್ನೆಚ್ಚರಿಕೆ ಗಂಟೆ ಬಾರಿಸುತ್ತಿದ್ದಂತೆ ಬೆಂಕಿ ನಿಯಂತ್ರಕದಿಂದ ಅಗ್ನಿ ಶಾಮಕ ಪೌಡರ್ ಬೋಗಿ ತುಂಬೆಲ್ಲಾ ಹರಡಿದೆ. ಇದರಿಂದ ಗಾಬರಿಗೊಂಡ ಆ ಬೋಗಿಯಲ್ಲಿದ್ದ ಪ್ರಯಾಣಿಕರು ಕಂಗಲಾಗಿದ್ದಾರೆ. ಕೂಡಲೇ ಅಲ್ಲಿದ್ದ ಎಮರ್ಜೆನ್ಸಿ ಫೋನ್ ಮೂಲಕ ರೈಲಿನ ಗಾರ್ಡಿಗೆ ಮಾಹಿತಿ ನೀಡಿದ ಬಳಿಕ ರೈಲು ಮನುಬೋಲು ಎಂಬಲ್ಲಿ ನಿಂತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ