ಜಾಮೀನು ಪಡೆದು ಹೊರಬಂದ ಯುವಕನಿಂದ ಕುಕೃತ್ಯ: ಯುವತಿಯನ್ನು ಪೀಸ್ ಪೀಸ್ ಮಾಡಿ ಭಯಾನಕ ಹತ್ಯೆ
12/12/2024
ಒಡಿಸ್ಸಾದ ರೂರ್ಕೆಲದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿದ್ದ ಆರೋಪಿ ಕುನು ಕಿಸನ್ ಎಂಬುವವ ಸಂತ್ರಸ್ತೆಯನ್ನು ಅಪಹರಿಸಿ ಹತ್ಯೆಗೈದಿದ್ದಾನೆ ಮತ್ತು ತುಂಡು ತುಂಡಾಗಿ ಕತ್ತರಿಸಿ ಅನೇಕ ಕಡೆ ಎಸೆದಿದ್ದಾನೆ.
ಅಪ್ರಾಪ್ತೆಯನ್ನು ಅತ್ಯಾಚಾರಗೈದ ಆರೋಪದಲ್ಲಿ ಈ ಕುನು ಕಿಸನ್ ನನ್ನು ಪೋಕ್ಸೋ ಕಾಯ್ದೆ ಅನ್ವಯ ಬಂಧಿಸಲಾಗಿತ್ತು.
ಇದೀಗ ಪೊಲೀಸರು ಬಾಲಕಿಯ ಮುಂಡ ಮತ್ತು ದೇಹದ ಭಾಗಗಳನ್ನು ವಿವಿಧ ಕಡೆಗಳಿಂದ ಸಂಗ್ರಹಿಸಿದ್ದಾರೆ. 2023 ಆಗಸ್ಟ್ ನಲ್ಲಿ ಈತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಸಂತ್ರಸ್ತ ಬಾಲಕಿ ತನ್ನ ಅತ್ತೆಯೊಂದಿಗೆ ವಾಸಿಸುತ್ತಿದ್ದಳು. ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj